ನವದೆಹಲಿ, ಜು. 12 (DaijiworldNews/HR): ಸುಮಾರು 16 ಲಕ್ಷ ಕಿಲೋಮೀಟರ್ ವೇಗದ ವೇಗದ ಸೌರ ಬಿರುಗಾಳಿ ಭೂಮಿಯನ್ನು ಸಮೀಪಿಸುತ್ತಿದ್ದು, ಇದು ಇಂದು ಭೂಮಿಯನ್ನು ಅಪ್ಪಳಿಸಲಿಲಿರುವುದರಿಂದ ಜಿಪಿಎಸ್ ನೇವಿಗೇಶನ್, ಮೊಬೈಲ್ ಫೋನ್ ಸಿಗ್ನಲ್ ಹಾಗೂ ಉಪಗ್ರಹ ಟಿವಿ ಸಿಗ್ನಲ್ಗಳಿಗೆ ಧಕ್ಕೆ ಉಂಟು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ನಾಸಾ, "ಇಂದು ಅಪ್ಪಳಿಸುವ ಬಿರುಗಾಳಿಯು ಸೂರ್ಯನ ವಾತಾವರಣದಲ್ಲಿ ಉಂಟಾಗಿರುವುದರಿಂದ ಸೂರ್ಯನ ಆಯಸ್ಕಾಂತೀಯ ಪ್ರಭಾವ ಇರುವ ಕ್ಷೇತ್ರಗಳ ಮೇಲೆ ಪ್ರಭಾವ ಬೀರುತ್ತದೆ" ಎಂದಿದೆ.
ಇನ್ನು "ಭೂಮಿಯ ಹೊರಗಿನ ವಾತಾವರಣವನ್ನು ಈ ಸೌರ ಬಿರುಗಾಳಿಯು ಬಿಸಿ ಮಾಡಬಹುದು. ಇದು ಉಪಗ್ರಹಗಳ ಮೇಲೆ ನೇರ ಪರಿಣಾಮ ಬೀರಲಿದ್ದು, ಇದು ಜಿಪಿಎಸ್ ನ್ಯಾವಿಗೇಷನ್, ಮೊಬೈಲ್ ಫೋನ್ ಸಿಗ್ನಲ್ ಮತ್ತು ಸ್ಯಾಟಲೈಟ್ ಟಿವಿಯಲ್ಲಿ ತೊಂದರೆಗೆ ಕಾರಣವಾಗಬಹುದಾಗಿದ್ದು ಜೊತೆಗೆ ವಿದ್ಯುತ್ ಲೈನ್ಗಳಲ್ಲಿ ಪ್ರವಾಹವು ಅಧಿಕವಾಗಿರಬಹುದು" ಎಂದು ನಾಸಾ ಹೇಳಿದೆ.
ಸೌರ ಚಂಡಮಾರುತದಿಂದಾಗಿ ಉತ್ತರ ಅಥವಾ ದಕ್ಷಿಣ ಧ್ರುವದಲ್ಲಿ ವಾಸಿಸುವ ಜನರಿಗೆ ಸುಂದರವಾದ ಆಕಾಶದ ಬೆಳಕಿನ ನೋಟ ಕಾಣಬಹುದಾಗಿದ್ದು,ಆಸುಪಾಸಿನ ಜನ ರಾತ್ರಿಯ ವೇಳೆಗೆ ಈ ರಮಣೀಯ ದೃಶ್ಯಕ್ಕೆ ಸಾಕ್ಷಿಯಾಗಬಹುದು.
ಇನ್ನು "ಈ ಸೌರ ಬಿರುಗಾಳಿಯು ಕೆಲವು ನಿಮಿಷಗಳಿಂದ ಕೆಲ ಗಂಟೆಗಳವರೆಗೆ ಇರಲಿದ್ದು, ಭೂಮಿಯ ಮೇಲ್ಮೈ ಹಾಗೂ ವಾತಾವರಣದಲ್ಲಿ ಇದರ ಪರಿಣಾಮವು ಕೆಲವು ದಿನಗಳು ಇರುಲಿದೆ" ಎಂದು ನಾಸಾ ತಿಳಿಸಿದೆ.