ನವದೆಹಲಿ, ಜು 12 (DaijiworldNews/MS): ಜಾಗತಿಕವಾಗಿ ಬ್ರಾಂಡ್ ಆಗಿ "ಖಾದಿ" ಯ ಗುರುತಿಸುವ ಪ್ರಯತ್ನದ ದೊಡ್ಡ ಹೆಜ್ಜೆಯಾದ ಭೂತಾನ್, ಯುಎಇ ಮತ್ತು ಮೆಕ್ಸಿಕೊ ಮೂರು ದೇಶಗಳಲ್ಲಿ ಟ್ರೇಡ್ಮಾರ್ಕ್ ನೋಂದಣಿಯನ್ನು ಪಡೆದುಕೊಂಡಿದೆ ಎಂದು ಖಾದಿ ಮತ್ತು ಗ್ರಾಮ ಕೈಗಾರಿಕಾ ಆಯೋಗ (ಕೆವಿಐಸಿ) ತಿಳಿಸಿದೆ.
ಈಗಾಗಲೇ ’ಕೆವಿಐಸಿ ’ಯೂ ಜರ್ಮನಿ, ಯುಕೆ, ಆಸ್ಟ್ರೇಲಿಯಾ, ರಷ್ಯಾ, ಚೀನಾ ಮತ್ತು ಇಯು ಎಂಬ ಆರು ದೇಶಗಳಲ್ಲಿ 'ಖಾದಿ' ಗೆ ಟ್ರೇಡ್ಮಾರ್ಕ್ ನೋಂದಣಿಯನ್ನು ಪಡೆದುಕೊಂಡಿದೆ. ಇದಲ್ಲದೆ ಅಮೆರಿಕ, ಕತಾರ್, ಶ್ರೀಲಂಕಾ, ಜಪಾನ್, ಇಟಲಿ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಸಿಂಗಾಪುರ, ಬ್ರೆಜಿಲ್ ಸೇರಿದಂತೆ 40 ರಾಷ್ಟ್ರಗಳಲ್ಲಿ ಟ್ರೇಡ್ಮಾರ್ಕ್ ನೋಂದಣಿ ಮಾಡಿಕೊಳ್ಳಲು ಸಿದ್ಧತೆ ನಡೆಸಿದೆ.ಈ ಮೂಲಕ ಖಾದಿ ಉತ್ಪನ್ನಗಳನ್ನು ಸಿದ್ಧಪಡಿಸುವವರಿಗೆ ಮತ್ತಷ್ಟು ಹೆಚ್ಚಿನ ಅನುಕೂಲ ಮಾಡಿಕೊಡಲು ನೆರವಾಗಿದೆ.
ಇದೀಗ ಭೂತಾನ್, ಯುಎಇ ಮತ್ತು ಮೆಕ್ಸಿಕೊದಲ್ಲಿ ಇತ್ತೀಚಿನ ಟ್ರೇಡ್ಮಾರ್ಕ್ ನೋಂದಣಿಯೊಂದಿಗೆ, ಒಟ್ಟು ಟ್ರೇಡ್ಮಾರ್ಕ್ ನೋಂದಣಿ ದೇಶಗಳ ಸಂಖ್ಯೆ ಒಂಬತ್ತಕ್ಕೆ ಏರಿದೆ.
ಜೂ.28 ರಂದು ಭೂತಾನ್, ಯುಎಇ ಮತ್ತು ಮೆಕ್ಸಿಕೋಗಳಲ್ಲಿ ಹೆಸರನ್ನು ನೋಂದಾಯಿಸಿದೆ ಎಂದು ಸಣ್ಣ, ಮಧ್ಯಮ ಮತ್ತು ಸೂಕ್ಷ್ಮ ಕೈಗಾರಿಕೆಗಳ ಸಚಿವಾಲಯ ಮಾಹಿತಿ ನೀಡಿದೆ. ಜರ್ಮನಿ, ಯು.ಕೆ., ಆಸ್ಟ್ರೇಲಿಯಾ, ರಷ್ಯಾ, ಚೀನ ಮತ್ತು ಐರೋಪ್ಯ ಒಕ್ಕೂಟಗಳಲ್ಲಿ “ಖಾದಿ’ ಎಂಬ ಹೆಸರು ನೋಂದಣಿಯಾಗಿದೆ.
ಕೆವಿಐಸಿ ಇತಿಹಾಸದಲ್ಲಿ ಮೊದಲ ಬಾರಿಗೆ ಕಳೆದ 5 ವರ್ಷಗಳಲ್ಲಿ" ಖಾದಿ "ಬ್ರಾಂಡ್ ಅನ್ನು ರಕ್ಷಿಸಲು ನಿರಂತರ ಪ್ರಯತ್ನಗಳು ನಡೆದಿವೆ.