ನವದೆಹಲಿ, ಜು 12 (DaijiworldNews/MS): ಜಗತ್ತಿನ ದೈತ್ಯ ಉದ್ಯಮಿಗಳೊಬ್ಬರಾದ ರಿಚರ್ಡ್ ಬ್ರಾನ್ಸನ್ ಅವರು ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಅವರ ಮಹೋನ್ನತ ಕನಸಾದ ಹವ್ಯಾಸಿ ಗಗನಯಾತ್ರೆ ಭಾನುವಾರ ಸಾಕಾರಗೊಂಡಿತು. ಈ ಮಹಾನ್ ಯೋಜನೆಯಲ್ಲಿ ಭಾರತ ಮೂಲದ್ ಶಿರಿಷಾ ಬಾಂದ್ಲ ಕೂಡಾ ಭಾಗವಹಿಸಿದ್ದು ವಿಶೇಷ.
ಬಾಹ್ಯಾಕಾಶ ಪಯಣ ಯಶಸ್ವಿಯಾದ ಬಳಿಕ ಪ್ರತಿಕ್ರಿಯಿಸಿರುವ ರಿಚರ್ಡ್ ಬ್ರಾನ್ಸನ್ ಅವರು " ಬಾಹ್ಯಕಾಶದಲ್ಲಿ ನಿಂತು ಭೂಮಿಯ ಮಧುರ ಕ್ಷಣವನ್ನು ಸವಿಯುವುದಕ್ಕಾಗಿ ಬಾಲ್ಯದಿಂದಲೂ ನಾನು ಕನಸು ಕಟ್ಟಿಕೊಂಡಿದ್ದೆನು. ಇದೀಗ ಮಾಂತ್ರಿಕ ಅನುಭವವನ್ನು ಪಡೆದುಕೊಂಡಿದ್ದೇನೆ" ಎಂದು ಹೇಳಿದ್ದಾರೆ
ವರ್ಜಿನ್ ಗ್ಯಾಲಕ್ಟಿಕ್ ಸ್ಪೇಸ್ಫ್ಲೈಟ್ ಕಂಪನಿ ಸಿದ್ಧಪಡಿಸಿದ ಅವಳಿ ವಿಮಾನಗಳುಳ್ಳ ಯೂನಿಟಿ 22 ಎಂಬ ಗಗನ ನೌಕೆಯಲ್ಲಿ ಆರು ಮಂದಿಯೊಂದಿಗೆ ರಿಚರ್ಡ್ ಬ್ರಾನ್ಸನ್ ಬಾಹ್ಯಾಕಾಶಕ್ಕೆ ಹಾರಿದರು. ಇಬ್ಬರು ಪೈಲೆಟ್ ಹಾಗೂ ಮೂವರು ಉದ್ಯೋಗಿ , ದಕ್ಷಿಣ ಭಾರತದ ಶಿರಿಷಾ ಜೊತೆಗೆ ಭಾನುವಾರ ನ್ಯೂ ಮೆಕ್ಸಿಕೋ ಮರುಭೂಮಿಯಿಂದ 89 ಕಿಲೋ ಮೀಟರ್ (53 ಮೈಲಿ) ಎತ್ತರಕ್ಕೆ ಹಾರಿದ್ದಾರೆ.
ರಾಕೆಟ್ ಮಾದರಿ ತಂತ್ರಜ್ಞಾನ ಬಾಹ್ಯಕಾಶ ನೌಕೆ ರನ್ ವೇ ಮೂಲಕ ಬಾಹ್ಯಕಾಶದತ್ತ ಪ್ರಯಾಣ ಬೆಳೆಸಿತು. ಬಾಹ್ಯಕಾಶದಲ್ಲಿ 90 ನಿಮಿಷ ಸುತ್ತಾಡಿ ಪೆಧರಿಂಗ್ ತಂತ್ರಜ್ಞಾನದೊಂದಿಗೆ ಪುನಃ ಭೂ ಮಂಡಲ ಪ್ರವೇಶಿ ತಾನು ಉಡಾವಣೆಗೊಂಡಿದ್ದ ಸ್ಪೇಸ್ ಪೋರ್ಟ್ ನ ರನ್ ವೇಗೆ ಯಶಸ್ವಿಯಾಗಿ ಬಂದಿಳಿಯಿತು.