ತಿರುವನಂತಪುರ, ಜು 12 (DaijiworldNews/MS): ಕೇರಳದಲ್ಲಿ ಭಾನುವಾರದಂದು ಮತ್ತೆ ಮೂವರು ವ್ಯಕ್ತಿಗಳಲ್ಲಿ ಝಿಕಾ ವೈರಸ್ ಪತ್ತೆಯಾಗಿದೆ. ಇದರಿಂದಾಗಿ ಈ ವೈರಸ್ಗೆ ಸೋಂಕಿತ ಪ್ರಕರಣಗಳ ಸಂಖ್ಯೆ 18ಕ್ಕೆ ಏರಿಕೆಯಾಗಿದೆ.
22 ತಿಂಗಳ ಮಗು, 46 ವರ್ಷದ ವ್ಯಕ್ತಿ ಮತ್ತು 29 ವರ್ಷದ ಆರೋಗ್ಯ ಕಾರ್ಯಕರ್ತರಲ್ಲಿ ಭಾನುವಾರ ಸೋಂಕು ದೃಢಪಟ್ಟಿದೆ.ಎಲ್ಲ ಸೋಂಕಿತರ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದೆ. ಸೋಂಕಿತರಲ್ಲಿ ಹೆಚ್ಚಿನವರು ನಗರದ ಖಾಸಗಿ ಆಸ್ಪತ್ರೆಯ ಆರೋಗ್ಯ ಕಾರ್ಯಕರ್ತರಾಗಿದ್ದಾರೆ ಎಂದು ತಿಳಿದುಬಂದಿದೆ.
ತಿರುವನಂತಪುರ, ತ್ರಿಶ್ಶೂರ್ ಮತ್ತು ಕಲ್ಲಿಕೋಟೆಯಲ್ಲಿರುವ ಸರಕಾರಿ ವೈದ್ಯ ಕಾಲೇಜುಗಳಲ್ಲಿ ಸೋಂಕು ದೃಢಪಡಿಸುವ ವ್ಯವಸ್ಥೆ ಮಾಡಲಾಗಿದೆ. ಆಲಪ್ಪಳದಲ್ಲಿ ರಾಷ್ಟ್ರೀಯ ವೈರಾಣು ಸಂಸ್ಥೆಯ ಘಟಕವನ್ನೂ ಆರಂಭಿಸಲಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ಎರಡು ಹಂತಗಳಲ್ಲಿ 27 ಮಾದರಿಗಳನ್ನು ಕಳುಹಿಸಲಾಗಿತ್ತು. ಮೂರನೇ ಹಂತದಲ್ಲಿ 8 ಮಾದರಿಗಳನ್ನು ಕಳುಹಿಸಿದ್ದರ ಪೈಕಿ ಮೂವರಿಗೆ ಸೋಂಕು ದೃಢಪಟ್ಟಿದೆ ಸಚಿವೆ ತಿಳಿಸಿದ್ದಾರೆ
ಇನ್ನು ಆರೋಗ್ಯ ಇಲಾಖೆಯ ಪ್ರಕಾರ, ರಾಷ್ಟ್ರೀಯ ವೈರಾಣು ಸಂಸ್ಥೆ ಪುಣೆಯಿಂದ ಸೋಂಕಿನ ಪತ್ತೆಗಾಗಿ 2,100 ಕಿಟ್ಗಳನ್ನು ಕೇರಳಕ್ಕೆ ನೀಡಲಾಗಿದೆ.