ಉತ್ತರಪ್ರದೇಶ, ಜು. 11 (DaijiworldNews/SM): ಯೋಗಿ ಆದಿತ್ಯನಾಥ ನೇತೃತ್ವದ ಉತ್ತರ ಪ್ರದೇಶ ಸರ್ಕಾರವು ಜನಸಂಖ್ಯೆ ನಿಯಂತ್ರಿಸುವುದಕ್ಕೆ ಹೋಸ ನೀತಿ ಜಾರಿಗೆ ತರಲು ಮುಂದಾಗಿದೆ.
ಜಿನಸಂಖ್ಯಾ ದಿನದಂದು ಸಾರ್ವಜನಿಕರನ್ನು ಉತ್ತೇಜಿಸಲು ಹೊಸ ಜನಸಂಖ್ಯಾ ನೀತಿಯನ್ನು ಘೋಷಣೆ ಮಾಡಿದೆ. 2021 ರಿಂದ 2030ರವರೆಗೂ ಜನಸಂಖ್ಯಾ ನೀತಿ ಜಾರಿಯಲ್ಲಿ ತರುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಈಗಾಗಲೇ ಸಿಎಂ ಯೋಗಿ ಆದಿತ್ಯನಾಥ್ ಅವರು ಜನಸಂಖ್ಯಾ ನೀತಿಯನ್ನು ಘೋಷಿಸಿದ್ದಾರೆ.
ಜನಸಂಖ್ಯಾ ಹೆಚ್ಚಳವು ಸಮಾಜದಲ್ಲಿ ವಿವಿಧ ಸಮಸ್ಯೆಗಳಿಗೆ ಕಾರಣವಾಗಲಿದೆ. ಅಭಿವೃದ್ಧಿ ಸಮಾಜ ನಿರ್ಮಾಣಕ್ಕೆ ತೊಡಕಾಗಲಿದೆ ಎಂದು ಹೇಳಿರುವ ಅವರು, ಜನ ಸಂಖ್ಯೆ ನಿಯಂತ್ರಣದ ಮೊದಲ ಹೆಜ್ಜೆ ಇದಾಗಿದೆ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.
ಹೊಸ ನೀತಿಯಂತೆ ರಾಜ್ಯದಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಇನ್ನುಮುಂದೆ ಹೊಂದಿರುವಂತಿಲ್ಲ. ಅಂತಹವರ ಸರ್ಕಾರಿ ಉದ್ಯೋಗಿಗಳಿಗೆ ಬಡ್ತಿ ನೀಡುವುದನ್ನು ನಿಷೇಧಿಸಲಾಗಿದೆ. ಅದರ ಜೊತೆಗೆ ಕೇವಲ ಇಬ್ಬರು ಮಕ್ಕಳನ್ನು ಹೊಂದಿರುವ ಪೋಷಕರಿಗೆ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ.