ನವದೆಹಲಿ, ಜು. 11 (DaijiworldNews/SM): ನಿಷೇಧಿತ ಉಗ್ರ ಸಂಘಟನೆಯಾಗಿರುವ ಐಎಸ್ಐಎಸ್ ಸಿದ್ಧಾಂತದ ಪ್ರಚಾರದ ಸಂಬಂಧಿಸಿದಂತೆ ಕಾಶ್ಮೀರದಲ್ಲಿ ಹಲವು ಪ್ರದೇಶಗಳಲ್ಲಿ ಎನ್ ಐ ಎಯಿಂದ ತೀವ್ರ ಸೋಧ ಕಾರ್ಯ ನಡೆಸಲಾಯಿತು. ಶ್ರೀನಗರ, ಅನಂತ್ ನಾಗ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ತೀವ್ರ ಶೋಧ ಕಾರ್ಯ ಮುಂದುವರೆದಿದೆ.
ಉಗ್ರ ಸಂಘಟನೆಗೆ ಭಾರತದಲ್ಲಿ ಪ್ರಭಾವಶಾಲಿ ಯುವಕರನ್ನು ಸೇರಿಸಿಕೊಂಡು ತೀವ್ರಗಾಮಿಗಳನ್ನಾಗಿಸುವುದಕ್ಕಾಗಿ ಸಂಚು ರೂಪಿಸಲಾಗುತ್ತಿದೆ. ಅಲ್ಲದೆ, ಇಸೀಸ್ ಉಗ್ರ ಸಂಘಟನೆಯ ಸಿದ್ಧಾಂತದ ಪ್ರಚಾರವನ್ನು ಮಾಡುತ್ತಿದ್ದರ ಬಗ್ಗೆ ಜೂ.29 ರಂದು ಪ್ರಕರಣವೊಂದು ದಾಖಲಾಗಿತ್ತು. ಭಾರತದಲ್ಲಿ ಜಿಹಾದ್ ಗೆ ಕರೆ ನೀಡುವುದು ಈ ಪ್ರಚಾರದ ಪ್ರಮುಖ ಉದ್ದೇಶವಾಗಿತ್ತು ಎಂದು ಎನ್ಐಎ ಹೇಳಿದೆ.
ಈಗಾಗಲೇ ದೇಶದ ವಿವಿಧ ಭಾಗಗಳಿಂದ ಉಗ್ರ ಸಂಘಟನೆಗಳು ಯುವಕರನ್ನು ಸೆಳೆದುಕೊಂಡಿದೆ. ಮತ್ತಷ್ಟು ಯುವಕರನ್ನು ಉಗ್ರ ಸಂಘಟನೆಯತ್ತ ಆಕರ್ಷಿಸುವ ನಿಟ್ಟಿನಲ್ಲಿ ವಿವಿಧೆಡೆಗಳಲ್ಲಿ ಪ್ರಯತ್ನ ನಡೆಸಲಾಗುತ್ತಿದೆ.