ಬೆಂಗಳೂರು, ಜು.11 (DaijiworldNews/HR): "ದೇಶದ ಸಂವಿಧಾನ ಕರ್ತೃ ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳನ್ನು ಅತಿ ಹೆಚ್ಚು ಅನುಷ್ಠಾನಗೊಳಿಸಿ ಅವರಿಗೆ ಗರಿಷ್ಠ ಗೌರವ ನೀಡಿದ ಪಕ್ಷ ಬಿಜೆಪಿ" ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಈ ಕುರಿತು ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ವರ್ಚುವಲ್ ಆಗಿ ಸೇರಿ ಉದ್ಘಾಟಿಸಿ ಮಾತನಾಡಿದ ಅವರು, "ಡಾ. ಅಂಬೇಡ್ಕರ್ ಅವರನ್ನು ಸೋಲಿಸಿದ ಮತ್ತು ಅವರಿಗೆ ಅವಮಾನ ಮಾಡಿದ ಕಾಂಗ್ರೆಸ್ ಪಕ್ಷಕ್ಕೆ ಅವರ ಹೆಸರು ಹೇಳಿ ಮತ ಕೇಳುವ ಯಾವ ಹಕ್ಕೂ ಉಳಿದಿಲ್ಲ. ದೆಹಲಿಯಲ್ಲಿ ಅವರ ಅಂತ್ಯಸಂಸ್ಕಾರಕ್ಕೆ ಅವಕಾಶವನ್ನೂ ಕಾಂಗ್ರೆಸ್ ನೀಡಲಿಲ್ಲ" ಎಂದು ಟೀಕಿಸಿದ್ದಾರೆ.
ಇನ್ನು ಬಿಜೆಪಿ ದಲಿತ ವಿರೋಧಿ ಎಂಬ ಅಪಪ್ರಚಾರವನ್ನು ಪ್ರಚಾರದ ಮೂಲಕ ಎದುರಿಸಬೇಕು ಎಂದು ಅವರು ಕರೆ ನೀಡಿದ ಅವರು, ಕಾಂಗ್ರೆಸ್ನ ಚಿಂತನೆಗಳನ್ನು ಆಧರಿಸಿದ ಡಾ. ಅಂಬೇಡ್ಕರ್ ಅವರು ಕಾಂಗ್ರೆಸ್ಸನ್ನು ಉರಿಯುವ ಮನೆ ಎಂದು ಕರೆದಿದ್ದರು. ಇದನ್ನು ತಿಳಿವಳಿಕೆ ಇರುವ ಜನರ ನಡುವೆ ಹಂಚಿಕೊಳ್ಳಬೇಕು" ಎಂದು ತಿಳಿಸಿದ್ದಾರೆ.