ಬೆಂಗಳೂರು, ಜು 11 (DaijiworldNews/PY): "ನಮಗೆ ಇರುವುದೊಂದೇ ಭೂಮಿ, ನಿಯಂತ್ರಣವಿಲ್ಲದ ಜನಸಂಖ್ಯಾ ಸ್ಫೋಟ ನಿಲ್ಲಿಸೋಣ" ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಮೊದಲ ನೂರು ಕೋಟಿ ತಲುಪಲು ಸಾವಿರಾರು ವರ್ಷ ಬೇಕಾಯಿತು! ನೂರರಿಂದ 700 ಕೋಟಿ ತಲುಪಲು ಕೇವಲ 200 ವರ್ಷಗಳು ಬೇಕಾಯಿತು! ನಮಗೆ ಇರುವುದೊಂದೇ ಭೂಮಿ, ಮೊದಲ ನೂರು ಕೋಟಿ ತಲುಪಲು ಸಾವಿರಾರು ವರ್ಷ ಬೇಕಾಯಿತು! ನೂರರಿಂದ 700 ಕೋಟಿ ತಲುಪಲು ಕೇವಲ 200 ವರ್ಷಗಳು ಬೇಕಾಯಿತು! ನಮಗೆ ಇರುವುದೊಂದೇ ಭೂಮಿ, ನಿಯಂತ್ರಣವಿಲ್ಲದ ಜನಸಂಖ್ಯಾ ಸ್ಫೋಟ ನಿಲ್ಲಿಸೋಣ" ಎಂದು ಮನವಿ ಮಾಡಿದ್ದಾರೆ.
ಜುಲೈ 11ರಂದು ವಿಶ್ವ ಜನಸಂಖ್ಯಾ ದಿನ ಎಂದು ಆಚರಿಸಲಾಗುತ್ತದೆ. ಚೀನಾ ಹಾಗೂ ಭಾರತದಲ್ಲಿ140 ಕೋಟಿ ಹಾಗೂ 130 ಕೋಟಿಗಿಂತ ಅಧಿಕ ಜನಸಂಖ್ಯೆ ಇದ್ದು, ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರಗಳ ಸಾಲಿನಲ್ಲಿ ಮೊದಲೆರೆಡು ಸ್ಥಾನಗಳಲ್ಲಿವೆ.