ಡೆಹ್ರಾಡೂನ್, ಜು.11 (DaijiworldNews/HR): ಉತ್ತರಾಖಂಡ ಜುನಾವಣೆಗೆ ಸಕಲ ಸಿದ್ದತೆಗಳು ನಡೆಯುತ್ತಿದ್ದು, ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಅಸ್ತ್ರವನ್ನು ಪ್ರಯೋಗಿಸುತ್ತಿವೆ ಎನ್ನಲಾಗಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಉತ್ತರಾಖಂಡ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ವಿರುದ್ಧ ಗೆಲುವು ಸಾಧಿಸುವಂತೆ ಪ್ರಯತ್ನಿಸುತ್ತಿದೆ.
ವಿದ್ಯುತ್ ಕಡಿತವಿಲ್ಲದೆ ಪ್ರತಿ ಮನೆಗಳಿಗೆ 300 ಯೂನಿಟ್ ವಿದ್ಯುತ್ ನನ್ನು ಉಚಿತವಾಗಿ ನೀಡುವ ಭರವಸೆಯನ್ನು ಉತ್ತರಾಖಂಡ ಜನರಿಗೆ ಆಮ್ ಆದ್ಮಿ ನೀಡಿದ್ದು, ಹಿಂದಿನ ಮಸೂದೆಗಳ ಮನ್ನಾ, ಮತ್ತು ರೈತರಿಗೆ ಉಚಿತ ಪೂರೈಕೆ ಮಾಡುವ ಭರವಸೆಯನ್ನ ಕೂಡ ನೀಡಿದೆ.
ಇನ್ನು ದೆಹಲಿಯಲ್ಲಿ ತಮ್ಮ ಪಕ್ಷದ ಪ್ರಮುಖ ನಾಯಕರೊಂದಿಗೆ ಮಾತನಾಡಿದ ಕೇಜ್ರಿವಾಲ್, ಹಿಲ್ ಸ್ಟೇಟ್ ಉತ್ತರಾಖಂಡದಲ್ಲಿ ಅಭಿವೃದ್ಧಿ ತರದ ಪಕ್ಷಗಳ ವಿರುದ್ಧವಾಗಿ, ಜನ ಪರವಾಗ ಆಮ್ ಆದ್ಮಿ ಪಕ್ಷ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದ್ದಾರೆ.