ಬೆಂಗಳೂರು, ಜು 11 (DaijiworldNews/PY): "ರೈತರ ಆದಾಯ ಡಬಲ್ ಮಾಡುತ್ತೇನೆಂದ ಪ್ರಧಾನಿ ನರೇಂದ್ರ ಮೋದಿ ರೈತರ ಖರ್ಚನ್ನ ಡಬಲ್ ಮಾಡುತ್ತಿದ್ದಾರೆ" ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ಇಂಧನ ತೈಲಗಳ ಬೆಲೆ ಏರಿಕೆ ಪರಿಣಾಮದ ಆಳ, ಅಗಲದ ಅಂದಾಜಿಲ್ಲಾದ ದುಷ್ಟ ಬಿಜೆಪಿ ಸರ್ಕಾರ ಬೆಲೆ ಏರಿಕೆ ಮೂಲಕ ಕೃಷಿ, ಉತ್ಪಾದನೆ, ಕೈಗಾರಿಕೆ ಸೇರಿದಂತೆ ಇಡೀ ಅರ್ಥ ವ್ಯವಸ್ಥೆಯನ್ನ ಬುಡಮೇಲಾಗಿಸಿದ್ದಾರೆ. ರೈತರ ಆದಾಯ ಡಬಲ್ ಮಾಡುತ್ತೇನೆಂದ ಪ್ರಧಾನಿ ನರೇಂದ್ರ ಮೋದಿ ರೈತರ ಖರ್ಚನ್ನ ಡಬಲ್ ಮಾಡುತ್ತಿದ್ದಾರೆ. ಈಗಾಗಲೇ ರೈತ ಸೋತಿದ್ದಾನೆ, ಮುಂದೆ ಸಾಯುತ್ತಾನೆ" ಎಂದು ಕಿಡಿಕಾರಿದೆ.
"ಸರ್ಕಾರದ ದುಡ್ಡು, ಬಿಜೆಪಿಯ ಜಾತ್ರೆ! ಸರ್ಕಾರಿ ಲಸಿಕೆಯನ್ನ ತನ್ನ ಫೋಟೋ ಅಂಟಿಸಿ ಹಣಕ್ಕೆ ಮಾರಿಕೊಂಡ ತೇಜಸ್ವಿ ಸೂರ್ಯ ಈಗ ಸರ್ಕಾರದ ರೇಷನ್ ಕಿಟ್ಗಳನ್ನ ಬಿಜೆಪಿ ಬ್ಯಾನರ್ ಮುಂದೆ ಹಂಚಿದ್ದಾರೆ. ಜಗದೀಶ್ ಶೆಟ್ಟರ್ ಕಾರ್ಮಿಕ ಇಲಾಖೆ ಕಿಟ್ಗಳಿಗೆ ತಮ್ಮ ಫೋಟೋ ಅಂಟಿಸಿ ಹಂಚಿದ್ದಾರೆ. ಅಧಿಕಾರ ದುರ್ಬಳಕೆಗೆ ಮಿತಿ ಬೇಡವೇ ಬಿಜೆಪಿ?" ಎಂದು ಪ್ರಶ್ನಿಸಿದೆ.