ರಾಯಚೂರು, ಜು.11 (DaijiworldNews/HR): ದೇವದುರ್ಗ ತಾಲೂಕಿನ ಗಬ್ಬೂರಿನಲ್ಲಿ ಮದುವೆ ನಿಶ್ಚಯವಾದ ಮೇಲೆ ಹುಡುಗ ಕಪ್ಪು ಎಂದು ವಿವಾಹ ನಿರಾಕರಿಸಿದ ತಂಗಿಯನ್ನು ಅಣ್ಣ ಕೊಡಲಿಯಿಂದ ಕೊಚ್ಚಿ ಹತ್ಯೆಗೈದ ಘಟನೆ ನಡೆದಿದೆ.
ಹತ್ಯೆಯಾದ ಯುವತಿಯನ್ನು ಚಂದ್ರಕಲಾ ( 22) ಎಂದು ಗುರುತಿಸಲಾಗಿದೆ.
ಜು.13ರಂದೇ ಮದುವೆ ನಿಶ್ಚಯವಾಗಿದ್ದು, ಮದುವೆ ಬೇಡ ಎಂದು ಯುವತಿ ಹೇಳಿದಕ್ಕೆ ಕೋಪಗೊಂಡ ಅಣ್ಣ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.
ಕೊಲೆಗೈದ ಯುವಕಕನನ್ನು ಶ್ಯಾಮಸುಂದರ ಎಂದು ಗುರುತಿಸಲಾಗಿದ್ದು, ಮನೆಯವರು ಮದುವೆಗೆ ಲಗ್ನ ಪತ್ರಿಕೆ ಸಹ ಹಂಚಿಕೆ ಮಾಡಿದ್ದು, ಇಲ್ಲಿಗಾಗಲೇ ಸಾಕಷ್ಟು ಖರ್ಚು ಮಾಡಿದ್ದರು ಎನ್ನಲಾಗಿದೆ.
ಗಬ್ಬೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.