ನವದೆಹಲಿ, ಜು.11 (DaijiworldNews/HR): ಪದ್ಮ ಪ್ರಶಸ್ತಿಗಳಿಗಾಗಿ ಸಾಧಕರನ್ನು ನಾಮನಿರ್ದೇಶನ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಾರತದ ನಾಗರಿಕರಲ್ಲಿ ಕೇಳಿಕೊಂಡಿದ್ದಾರೆ.
ಈ ಕುರಿತು 'ಪೀಪಲ್ಸ್ ಪದ್ಮ' ಹ್ಯಾಶ್ಟ್ಯಾಗ್ನೊಂದಿಗೆ ಟ್ವೀಟ್ ಮಾಡಿರುವ ಅವರು, "ಭಾರತ ದೇಶವು ಅನೇಕ ಪ್ರತಿಭಾವಂತರನ್ನು ಒಳಗೊಂಡಿದ್ದು, ಅವರು ತಳಮಟ್ಟದಲ್ಲಿ ಅಸಾಧಾರಣ ಕೆಲಸ ಮಾಡುತ್ತಿದ್ದಾರೆ. ಅಂತಹ ವ್ಯಕ್ತಿಗಳ ಬಗ್ಗೆ ನಾವು ಹೆಚ್ಚಾಗಿ ಕೇಳಿರುವುದಿಲ್ಲ. ಈ ಸ್ಪೂರ್ತಿದಾಯಕ ವ್ಯಕ್ತಿಗಳ ಬಗ್ಗೆ ನಿಮಗೆ ತಿಳಿದಿದೆಯೇ? ನೀವು ಅವರನ್ನು ಪೀಪಲ್ಸ್ ಪದ್ಮಗೆ ನಾಮನಿರ್ದೇಶನ ಮಾಡಬಹುದು" ಎಂದಿದ್ದಾರೆ.
ಇನ್ನು "ಸೆಪ್ಟೆಂಬರ್ 15ರವರೆಗೆ ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನ ಮಾಡಲು ಅವಕಾಶವಿದ್ದು, ನಾಮನಿರ್ದೇಶನ ಮಾಡಲು https://padmaawards.gov.in ವೆಬ್ಸೈಟ್ ವಿಳಾಸವನ್ನು ಉಪಯೋಗಿಸಿ ಎಂದು ಹೇಳಿದ್ದಾರೆ.