ನವದೆಹಲಿ, ಜು.11 (DaijiworldNews/HR): ಕೊರೊನಾಸೋಂಕು ಕೊಂಚ ಇಳಿಕೆಯಾಗುತ್ತಿರುವ ಬೆನ್ನಲ್ಲೇ ಕೇರಳದಲ್ಲಿ ಜಿಕಾ ವೈರಸ್ ಕಾಣಿಸಿಕೊಂಡಿದ್ದು, ಇಂದು ಮತ್ತೊಬ್ಬ ವ್ಯಕ್ತಿಯಲ್ಲಿ ಜಿಕಾ ವೈರಸ್ ಸೋಂಕು ಪತ್ತೆಯಾಗಿದ್ದು, ಜಿಕಾ ವೈರಸ್ ಸೋಂಕಿತರ ಸಂಖ್ಯೆ 15 ಕ್ಕೆ ಏರಿಕೆಯಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಸಾರ್ವಜನಿಕ ಆರೋಗ್ಯ ತಜ್ಞ ಡಾ. ಮ್ಯಾಥ್ಯೂ ವರ್ಗೀಸ್, "ಕೇರಳದಲ್ಲಿ ಇಲ್ಲಿಯವರೆಗೆ 15 ಮಂದಿಗೆ ಜಿಕಾ ವೈರಸ್ ದೃಢಪಟ್ಟಿದ್ದು, ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಕಾಳಜಿ ವಹಿಸಬೇಕು" ಎಂದು ಅವರು ಎಚ್ಚರಿಸಿದ್ದಾರೆ.
ಇನ್ನು ಜಿಕಾ ವೈರಸ್ ಸಂಪರ್ಕ ಅಥವಾ ಏರೋಸಾಲ್ ಗಳಿಂದ ಹರಡುವುದಿಲ್ಲ. ಇದು ಸೊಳ್ಳೆಗಳಿಂದ ಹರಡುತ್ತದೆ ಹಾಗಾಗಿ ವೈರಸ್ ಮತ್ತು ಸೊಳ್ಳೆಗಳನ್ನು ನಿಯಂತ್ರಿಸುವ ಮಾರ್ಗವನ್ನು ಕಂಡುಹಿಡಿಯಬೇಕು. ನಾವು ಜನರಲ್ಲಿ ಭಯವನ್ನು ಸೃಷ್ಟಿಸಬಾರದು ತಿಳಿಸಿದ್ದಾರೆ.