ಬಿಡದಿ, ಜು 11 (DaijiworldNews/PY): ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಅವರನ್ನು ಟೀಕಿಸಿರುವ ಸಂಸದ ಡಿ.ಕೆ.ಸುರೇಶ್, "ಯೋಗೇಶ್ವರ್ ಓರ್ವ 420 ವ್ಯಕ್ತಿಯಾಗಿದ್ದಾರೆ" ಎಂದಿದ್ದಾರೆ.
ಬಿಡದಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಯೋಗೇಶ್ವರ್ ಅವರನ್ನು ಜನರೇ 420 ಎಂದು ಕರೆಯುತ್ತಾರೆ. ನಾನು ಆ 420 ಮಾತಿಗೆ ಏನು ಹೇಳಬೇಕು" ಎಂದು ಕೇಳಿದ್ದಾರೆ.
ಬಿಜೆಪಿಗೆ ಎಲ್ಲಿಂದಲೋ ಬಂದವರು ಹಾಗೂ ಜೈಲಿಗೆ ಹೋಗಿ ಬಂದವರನ್ನು ಸೇರಿಸಿಕೊಳ್ಳುವುದಿಲ್ಲ ಎಂದು ಯೋಗೇಶ್ವರ್ ಹೇಳಿಕೆ ಬಗ್ಗೆ ಮಾತನಾಡಿದ ಅವರು, "ಅಂತವರ ಮಾತಿಗೆ ಯಾವುದೇ ಪ್ರತಿಕ್ರಿಯೆ ನೀಡಬೇಕಾಗಿಲ್ಲ" ಎಂದಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರೋರ್ವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕಪಾಳಮೋಕ್ಷ ಮಾಡಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, "ಬಿಜೆಪಿಗರಿಗೆ ಮಾಡಲು ಬೇರೆ ಕೆಲಸವಿಲ್ಲ. ಈ ವಿಚಾರಗಳನ್ನೆಲ್ಲಾ ದೊಡ್ಡದಾಗಿ ಬಿಂಬಿಸಲು ಹೊರಟಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಬೇರೆಯವರ ಹೆಗಲ ಮೇಲೆ ಕೈಹಾಕಿದರೆ ಸಂಬಂಧ ಇದೆ ಎಂದು ಹೇಳುತ್ತಾರೆ. ಯಾರೋ ಒಬ್ಬರು ಬಂದು ಹೆಗಲ ಮೇಲೆ ಕೈ ಹಾಕುವಾಗ ಏನು ಮಾಡಬೇಕು ಎನ್ನುವುದನ್ನು ನೀವೇ ಹೇಳಬೇಕು" ಎಂದಿದ್ದಾರೆ.