ನವದೆಹಲಿ, ಜು 10 (DaijiworldNews/MS): ಕೊರೊನಾ ವೈರಸ್ ಹಬ್ಬುವಿಕೆ ದಿನದಿಂದ ದಿನಕ್ಕೆ ಬದಲಾಗುತ್ತದೆ. ಈ ನಡುವೆ ಕೊರೊನಾ ಹೊಸ ಹೊಸ ರೂಪಂತರಿ ವೈರಸ್ ಗಳ ಭಯ ಕಾಡುತ್ತಿದೆ .ಈ ಹಿನ್ನೆಲೆಯಲ್ಲಿ ಕೊರೊನಾ ನಿಯಮಗಳನ್ನು ಪಾಲಿಸದಿದ್ದರೆ ಮತ್ತೊಮ್ಮೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಎಚ್ಚರಿಸಿದೆ.
ನಿರ್ಬಂಧಗಳನ್ನು ಪಾಲಿಸದೆ ಜನರು ಪ್ರವಾಸಿ ಪ್ರದೇಶಗಳಲ್ಲಿ ಅಲೆದಾಡುತ್ತಿರುವುದು ಆತಂಕದ ವಿಷಯವಾಗಿದೆ. ಕೊರೊನಾದ 7 ನೇ ರೂಪಾಂತರ ಲ್ಯಾಂಬ್ಡಾ ಪತ್ತೆಯಾಗಿದ್ದು, ಈ ನಡುವೆ ವಿವಿಧ ದೇಶಗಳಲ್ಲಿ ಹಬ್ಬಿ, ಆತಂಕಕಕ್ಕೆ ಕಾರಣವಾಗಿದೆ ಆದರೆ ಇದು ಭಾರತದಲ್ಲಿ ಪತ್ತೆಯಾಗಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
"ಲ್ಯಾಮ್ಡಾ ರೂಪಾಂತರಿ ಎಂಬುದು ವೆರಿಯೆಂಟ್ ಆಫ್ ಇಂಟ್ರಸ್ಟ್. ಈ ರೂಪಾಂತರವನ್ನು ಎಚ್ಚರಿಕೆಯಿಂದ ಪರಿಗಣಿಸಬೇಕು. ರೂಪಾಂತರವು ಪೆರುವಿನಲ್ಲಿ ಪ್ರಧಾನವಾಗಿದೆ ಮತ್ತು ಇದನ್ನು ಮೊದಲು ಪೆರುವಿನಲ್ಲಿ ವರದಿ ಮಾಡಲಾಗಿದೆ. ಈ ಬಗ್ಗೆ ಭಾರತದಲ್ಲಿಯೂ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ಹೇಳಿದ್ದಾರೆ.