ಭೋಪಾಲ, ಜು.09 (DaijiworldNews/HR): ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರು ಅನಾರೋಗ್ಯದ ಕಾರಣಗಳನ್ನು ನೀಡಿ ಸದಾ ಗಾಲಿಕುರ್ಚಿಯಲ್ಲಿ ತೆರಳುತ್ತಿದ್ದು, ಇತ್ತೀಚೆಗಷ್ಟೇ ಬಾಸ್ಕೆಟ್ಬಾಲ್ ಆಡಿ ಅಚ್ಚರಿ ಮೂಡಿಸಿದ್ದು ಇದೀಗ ನೃತ್ಯ ಮಾಡುವ ಮೂಲಕ ಮತ್ತೊಮ್ಮೆ ಗಮನ ಸೆಳೆದಿದ್ದಾರೆ.
ಭೋಪಾಲದಲ್ಲಿರುವ ತಮ್ಮ ನಿವಾಸದಲ್ಲಿ ಬಡ ಕುಟುಂಬದ ಯುವತಿಯರ ವಿವಾಹ ಕಾರ್ಯಕ್ರಮದಲ್ಲಿ ಪ್ರಜ್ಞಾ ಸಿಂಗ್ ಠಾಕೂರ್ ಭಾಗಿಯಾಗಿ ಡ್ಯಾನ್ಸ್ ಮಾಡುತ್ತಿರುವ ದೃಶ್ಯ ಕಂಡುಬಂದಿದೆ.
ಇನ್ನು ನಮ್ಮ ಭೋಪಾಲದ ಸಂಸದೆ ಬ್ಯಾಸ್ಕೆಟ್ಬಾಲ್ ಆಡುವುದನ್ನು, ಯಾರ ಬೆಂಬಲವಿಲ್ಲದೆ ನಡೆದಾಡುವುದು ಮತ್ತು ಈ ರೀತಿ ಖುಷಿಯಿಂದ ನೃತ್ಯ ಮಾಡುವುದನ್ನು ನೋಡಿದಾಗಲೆಲ್ಲಾ ತುಂಬಾ ಸಂತೋಷವಾಗುತ್ತಿದೆ ?' ಎಂದು ವ್ಯಂಗ್ಯ ಮಾಡಿದ್ದಾರೆ.