ನವದೆಹಲಿ, ಜು.09 (DaijiworldNews/HR): ಝೈಡಸ್ ಕ್ಯಾಡಿಲಾ ಕೊರೊನಾ ಲಸಿಕೆ 12 ರಿಂದ18 ವರ್ಷ ವಯಸ್ಸಿನವರಿಗೆ ಸೆಪ್ಟೆಂಬರ್ ಅಂತ್ಯದ ವೇಳೆಗೆ ಲಭ್ಯವಾಗುವ ನಿರೀಕ್ಷೆಯಿದೆ ಎಂದು ರಾಷ್ಟ್ರೀಯ ತಾಂತ್ರಿಕ ಸಲಹಾ ಅಧ್ಯಕ್ಷ ಡಾ. ಎನ್.ಕೆ.ಅರೋರಾ ಹೇಳಿದ್ದಾರೆ.
ಸಾಂಧರ್ಭಿಕ ಚಿತ್ರ
ಈ ಕುರಿತು ಮಾಹಿತಿ ನೀಡಿದ ಅವರು, "12 ರಿಂದ 18 ವರ್ಷ ವಯಸ್ಸಿನವರಿಗೆ ಝೈಡಸ್ ಕ್ಯಾಡಿಲಾ ಅವರ ದತ್ತಾಂಶವು ಮುಂದಿನ ತಿಂಗಳು ಅಥವಾ ಸೆಪ್ಟೆಂಬರ್ ಆರಂಭದಲ್ಲಿ ಲಭ್ಯವಾಗಲಿದ್ದು, ನಾವು ಖಂಡಿತವಾಗಿಯೂ ಅದನ್ನು ನೀಡಲು ಸಾಧ್ಯವಾಗುತ್ತದೆ" ಎಂದಿದ್ದಾರೆ.
ಇನ್ನು "12-18 ವಯೋಮಾನದವರಿಗೆ ಭಾರತ್ ಬಯೋಟೆಕ್ ನ ಕೋವಾಕ್ಸಿನ್ ಲಸಿಕೆಯ ವಿವರಗಳನ್ನು ನೀಡಿದ ಅವರು, ದೇಶೀಯ ಲಸಿಕೆಯ ವೈದ್ಯಕೀಯ ಪ್ರಯೋಗಗಳು ಪ್ರಾರಂಭವಾಗಿವೆ ಮತ್ತು ಸೆಪ್ಟೆಂಬರ್ ಅಂತ್ಯದೊಳಗೆ ದತ್ತಾಂಶವನ್ನು ಸಲ್ಲಿಸಬಹುದು ಎಂದು ಹೇಳಿದರು. 2022ರ ಜನವರಿ-ಫೆಬ್ರವರಿ ಆರಂಭದಲ್ಲಿ ಲಸಿಕೆ ಯನ್ನು ನೀಡುವ ಸಾಧ್ಯತೆಯಿದೆ" ಎಂದರು.
ಜೂನ್ನಲ್ಲಿ, ಕೇಂದ್ರ ಸರ್ಕಾರವು ಝೈಡಸ್ ಕ್ಯಾಡಿಲಾ ಲಸಿಕೆಗಳು 12-18 ವರ್ಷ ವಯಸ್ಸಿನವೈದ್ಯಕೀಯ ಪ್ರಯೋಗವನ್ನು ಮುಕ್ತಾಯಗೊಳಿಸಿವೆ ಎಂದು ಸುಪ್ರೀಂ ಕೋರ್ಟ್ ಗೆ ತಿಳಿಸಿತು.
ಇನ್ನು ಡಿಸೆಂಬರ್ ಅಂತ್ಯದ ವೇಳೆಗೆ ಝೈಡಸ್ ಕ್ಯಾಡಿಲಾದ ಐದು ಕೋಟಿ ಲಸಿಕೆ ಡೋಸ್ ಗಳನ್ನು ಸಂಗ್ರಹಿಸಲಾಗುವುದು ಎಂದು ಸರ್ಕಾರ ಹೇಳಿದೆ ಎನ್ನಲಾಗಿದೆ.