ಬೆಂಗಳೂರು, ಜು.09 (DaijiworldNews/HR): ಎಚ್ ಡಿ ಕುಮಾರಸ್ವಾಮಿ ಮತ್ತು ಸಂಸದೆ ಸುಮಲತಾ ನಡುವಿನ ವಾಕ್ಸಮರ ತಾರಕಕ್ಕೇರಿದ್ದು, ಇದೀಗ ಇವರಿಬ್ಬರ ಜಗಳಕ್ಕೆಕೆ ಅಂಬರೀಷ್ ಕುಟುಂಬದ ಆಪ್ತ ರಾಕ್ಲೈನ್ ವೆಂಕಟೇಶ್ ಎಂಟ್ರಿ ಕೊಟ್ಟು ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂಬರೀಷ್ ಅವರ ದೇಹವನ್ನು ಮಂಡ್ಯಕ್ಕೆ ಸೇನಾ ಹೆಲಿಕಾಪ್ಟರ್ನಲ್ಲಿ ತೆಗೆದುಕೊಂಡು ಹೋಗಲು ಮುಖ್ಯಮಂತ್ರಿಯಾಗಿ ನಾನೇ ಸಹಾಯ ಮಾಡಿದೆ ಎಂದು ಕುಮಾರಸ್ವಾಮಿ ಹೇಳಿದ್ದರ ಆಕ್ರೋಶ ವ್ಯಕ್ತಪಡಿಸಿದ ರಾಕ್ಲೈನ್ ವೆಂಕಟೇಶ್ , "ದಾರಿಯಲ್ಲಿ ಹೋಗ್ತಿದ್ದ ದಾಸಪ್ಪ ಸಿಎಂ ಆಗಿದ್ದರೂ ಆ ಕೆಲಸ ಮಾಡುತ್ತಿದ್ದರು" ಎಂದಿದ್ದಾರೆ.
ಈ ಬಗ್ಗೆ ಕುಮಾರಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡ ರಾಕ್ಲೈನ್ ವೆಂಕಟೇಶ್ , "ಅಂಬರೀಶ್ ವಿಚಾರ ಮಾತನಾಡುವಾಗ ಪ್ರಜ್ಞೆ ಇರಲಿ. ಭ್ರಷ್ಟಾಚಾರ ಅಂತಾರೆ ಮತ್ತೊಂದ್ಕಡೆ ಸ್ನೇಹಿತ ಅಂತಾ ಹೇಳ್ತಾರೆ. ಚಿತ್ರರಂಗದ ಬಗ್ಗೆ ಮಾತನಾಡುತ್ತೀರಾ ಅಲ್ವಾ? ಚಿತ್ರರಂಗದಿಂದ ನೀವೂ ಲಾಭ ಮಾಡಿಕೊಂಡಿದ್ದೀರಾ. ನೀವು ಮುಖ್ಯಮಂತ್ರಿಯಾಗಿದ್ದಾಗ ಚಿತ್ರರಂಗಕ್ಕೆ ಏನ್ ಮಾಡಿದ್ದೀರಾ? ಅಭಿಷೇಕ್ ಒತ್ತಾಯ ಮಾಡಿ ತಮ್ಮ ತಂದೆ ಅಂಬರೀಷ್ರ ಮೃತದೇಹವನ್ನ ಮಂಡ್ಯಕ್ಕೆ ಕೊಂಡೊಯ್ಯಲು ಹೇಳಿದರು. ಅಂಥದ್ದರಲ್ಲಿ ಸಾವಿನ ರಾಜಕಾರಣ ಯಾಕೆ ಮಾಡಲು ಹೋಗ್ತಿದ್ದೀರಾ? ಎಂದು ಪ್ರಶಿಸಿದ್ದಾರೆ.
ಇನ್ನು ಒಬ್ಬರಿಗೆ ಗೌರವ ಕೊಡೋದು ತಪ್ಪಲ್ಲ ಸ್ವಾಮಿ. ಕುಮಾರಸ್ವಾಮಿ ನನ್ನ ಮುಂದೆ ಬಂದ್ರೂ ನಮಸ್ಕಾರ ಹೇಳುತ್ತೇನೆ. ಅಂಬರೀಷ್ ಇದ್ದಾಗ ನೀವು ಯಾವ ರೀತು ಮಾತನಾಡ್ತಿದ್ರಿ. ಈಗ ವಾಲ್ಯೂಮ್ ರೈಸ್ ಮಾಡಿ ಮಾತನಾಡಬೇಡಿ" ಎಂದು ಹೇಳಿದ್ದಾರೆ.