ಮೈಸೂರು, ಜು.09 (DaijiworldNews/HR): ಕೊರೊನಾ ಕಾರಣದಿಂದಾಗಿ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ(ಕೆ-ಸೆಟ್)ಗೆ ನಿಗದಿ ಪಡಿಸಲಾಗಿದ್ದಂತ ಪರೀಕ್ಷಾ ದಿನಾಂಕವನ್ನು ಮುಂದೂಡಲಾಗಿದ್ದು, ಇದೀಗ ಮತ್ತೆ ಜುಲೈ 25ಕ್ಕೆ ನಡೆಸಲಾಗುತ್ತದೆ ಎಂದು ತಿಳಿದು ಬಂದಿದೆ.
ಸಾಂಧರ್ಭಿಕ ಚಿತ್ರ
ಈ ಕುರಿತು ಮೈಸೂರು ವಿಶ್ವವಿದ್ಯಾಲಯದ ಕೆಸೆಟ್ ಕೇಂದ್ರದ ಸಂಯೋಜನಾಧಿಕಾರಿಗಳು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಮೈಸೂರು ವಿಶ್ವವಿದ್ಯಾಲಯವು ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯನ್ನು ಕೊರೊನಾದಿಂದ ಮುಂದೂಡಲಾಗಿದ್ದು, ಇದೀಗ ಕೆಸೆಟ್ 2021ರ ಪರೀಕ್ಷೆಯನ್ನು ಜುಲೈ.25ರ ಭಾನುವಾರದಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದೆ.
ಇನ್ನು ಎಲ್ಲಾ ನೋಂದಾಯಿತ ಅಭ್ಯರ್ಥಿಗಳು ಕೆಸೆಟ್ 2021ರ ಪರೀಕ್ಷೆಗೆ ಸಂಬಂಧಿಸಿದಂತೆ ಕೆಸೆಟ್ ವೆಬ್ ಸೈಟ್ http://kset.uni-mysore.ac.in/ ನಲ್ಲಿ ಆಗಿಂದಾಗಲೇ ಹೊರಡಿಸುವ ವಿಷಯಗಳನ್ನು ನೋಡಬಹುದಾಗಿ ಎಂದು ತಿಳಿಸಿದ್ದಾರೆ.