ನವದೆಹಲಿ, ಜು. 08 (DaijiworldNews/SM): ನಾನು ಈ ಹಿಂದೆ ಹಳ್ಳಿಗಳಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಗುರುತಿಸಿಕೊಂಡು ನನನ್ನು ಕೇಂದ್ರ ಸಚಿವೆಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಕೃಷಿ ರಾಜ್ಯ ಖಾತೆ ಸಚಿವ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ರೈತರ ಸಮಸ್ಯೆಗಳನ್ನು ಅರಿತುಕೊಂಡು ಅವರ ಭಾವನೆಗಳಿಗೆ ಸ್ಪಂಧಿಸುವ ಮಹತ್ವದ ಜವಾಬ್ದಾರಿ ನನ್ನ ಮೇಲಿದೆ. ದೇಶದ ರೈತರು ಬದುಕಬೇಕು ಹಾಗೂ ತಮ್ಮ ಆದಾಯ ಹೆಚ್ಚಿಸಬೇಕೆಂಬುವುದು ಪ್ರಧಾನಿ ನರೇಂದ್ರ ಮೋದಿಯವರ ಕನಸಾಗಿದೆ. ಇಂದು ರೈತರು ತಮ್ಮ ಕೆಲಸ ತೊರೆದು ನಗರಗಳತ್ತ ವಲಸೆ ಹೊರಟಿದ್ದಾರೆ. ಇದನ್ನು ತಪ್ಪಿಸಿ ರೈತ ಹಳ್ಳಿಯಲ್ಲೇ ಇರಬೇಕೆನ್ನುವು ಪ್ರಧಾನಿಯವರ ಆಶಯವಾಗಿದೆ. ಈ ನಿಟ್ಟಿನಲ್ಲಿ ನಾನು ಕೆಲಸ ಮಾಡುವುದಾಗಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.