ನವದೆಹಲಿ, ಜು.08 (DaijiworldNews/HR): 17 ರಾಜ್ಯಗಳಿಗೆ 9,871 ಕೋಟಿ ರೂ.ಗೆ ನಾಲ್ಕನೇ ಮಾಸಿಕ ಕಂತು ಹಂಚಿಕೆ ಆದಾಯ ಕೊರತೆ ಅನುದಾನವನ್ನು ಬಿಡುಗಡೆ ಮಾಡಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಈಗಿನ ಹಣಕಾಸು ವರ್ಷದಲ್ಲಿ ಅರ್ಹ ರಾಜ್ಯಗಳಿಗೆ ಒಟ್ಟು 39,484 ಕೋಟಿ ರೂ. ಬಿಡುಗಡೆ ಆಗಿದ್ದು, ಹಣಕಾಸು ಸಚಿವಾಲಯದ ಖರ್ಚು ಇಲಾಖೆ 4 ನೇ ಮಾಸಿಕ ಕಂತಿನ ಪೋಸ್ಟ್ ಡಿವಲ್ಯೂಷನ್ ಕಂದಾಯ ಕೊರತೆ ಅನುದಾನವನ್ನು ರಾಜ್ಯಗಳಿಗೆ 9,871 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಇನ್ನು ಸಂವಿಧಾನದ 275 ನೇ ವಿಧಿ ಅನ್ವಯ ರಾಜ್ಯಗಳಿಗೆ ಹಂಚಿಕೆ ನಂತರದ ಆದಾಯ ಕೊರತೆ ಅನುದಾನವನ್ನು ಒದಗಿಸಲಾಗಿದೆ.
ಅಧಿಕಾರ ಹಂಚಿಕೆಯ ನಂತರದ ರಾಜ್ಯಗಳ ಆದಾಯ ಖಾತೆಗಳಲ್ಲಿನ ಅಂತರವನ್ನು ಪೂರೈಸಲು 15 ನೇ ಹಣಕಾಸು ಆಯೋಗದ ಶಿಫಾರಸುಗಳ ಪ್ರಕಾರ ಮಾಸಿಕ ಕಂತುಗಳಲ್ಲಿ ಅನುದಾನವನ್ನು ಬಿಡುಗಡೆ ಮಾಡಲಾಗುತ್ತದೆ. ಆಯೋಗವು 2021-22ರ ಅವಧಿಯಲ್ಲಿ 17 ರಾಜ್ಯಗಳಿಗೆ ಪಿಡಿಆರ್ಡಿ ಅನುದಾನವನ್ನು ಶಿಫಾರಸು ಮಾಡಿದ್ದು, ಈ ಅನುದಾನವನ್ನು ಸ್ವೀಕರಿಸಲು ರಾಜ್ಯಗಳ ಅರ್ಹತೆ ಮತ್ತು ಅನುದಾನದ ಪ್ರಮಾಣವನ್ನು ಆಯೋಗವು 2021-22ರ ಆರ್ಥಿಕ ವರ್ಷದ ಮೌಲ್ಯಮಾಪನ ಹಂಚಿಕೆಯನ್ನು ಗಣನೆಗೆ ತೆಗೆದುಕೊಂಡ ನಂತರ ರಾಜ್ಯದ ಆದಾಯ ಮತ್ತು ಖರ್ಚಿನ ಮೌಲ್ಯಮಾಪನ ನಡುವಿನ ಅಂತರವನ್ನು ಆಧರಿಸಿ ನಿರ್ಧರಿಸಿತು.