ನವದೆಹಲಿ, ಜು 08 (DaijiworldNews/MS): ಫ್ರಾನ್ಸ್ನಲ್ಲಿರುವ ಸುಮಾರು 20 ಭಾರತೀಯ ಸರ್ಕಾರಿ ಆಸ್ತಿಯನ್ನು ಮುಟ್ಟುಗೋಲು ಹಾಕಲು ಫ್ರಾನ್ಸ್ನ ನ್ಯಾಯಾಲಯವೊಂದು ಆದೇಶಿಸಿದೆ ಎಂಬ ವರದಿಯ ಕುರಿತಾಗಿ ಪ್ರತಿಕ್ರಿಯಿಸಿರುವ ಭಾರತ ಸರ್ಕಾರ ಫ್ರೆಂಚ್ ನ್ಯಾಯಾಲಯ ನೀಡಿರುವ ಆದೇಶದ ಕುರಿತು ತಮಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ಗುರುವಾರ ಸ್ಪಷ್ಟನೆ ನೀಡಿದೆ.
ಬ್ರಿಟನ್ನ ಕೈರ್ನ್ ಎನರ್ಜಿ 1.7 ಬಿಲಿಯನ್ ಯುಎಸ್ ಡಾಲರ್ ನಷ್ಟವನ್ನು ವಸೂಲಿ ಮಾಡುವುದಕ್ಕಾಗಿ ಪಿಎಲ್ಸಿ ಪಡೆದುಕೊಂಡ ವರದಿಯ ನಂತರ ಕೇಂದ್ರದ ಮೋದಿ ಸರ್ಕಾರ, " ಭಾರತ ಸರ್ಕಾರದಿಂದ ಬರಬೇಕಾದ 1.7 ಬಿಲಿಯನ್ ಡಾಲರ್ನ ಒಂದು ಭಾಗವನ್ನು ಮರುಪಡೆಯಲು ಮಧ್ಯಸ್ಥಿಕೆ ಸಮಿತಿಯು ಹಿಂದಿನ ತೆರಿಗೆಯನ್ನು ವಿಧಿಸುವುದನ್ನು ರದ್ದುಪಡಿಸಿದೆ" ಎಂದು ತಿಳಿಸಿದೆ.
ಕೈರ್ನ್ ಎನರ್ಜಿ ಪಿಲ್ಸಿಗೆ 1.2 ಮಿಲಿಯನ್ ಡಾಲರ್ಗೂ ಅಧಿಕ ಬಡ್ಡಿ ಮತ್ತು ದಂಡ ಪಾವತಿಸುವಂತೆ ಡಿಸೆಂಬರ್ನಲ್ಲಿ ಭಾರತ ಸರ್ಕಾರಕ್ಕೆ ಆದೇಶಿಸಿದ್ದು, ಭಾರತ ಸರ್ಕಾರ ಈ ಆದೇಶವನ್ನು ಒಪ್ಪಿರಲಿಲ್ಲ. ಬಳಿಕ ಕೈರ್ನ್ ಎನರ್ಜಿ ಭಾರತ ಸರ್ಕಾರದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ ಬಾಕಿ ವಸೂಲಿ ಮಾಡಲು ಅವಕಾಶ ನೀಡುವಂತೆ ನ್ಯಾಯಾಲಕ್ಕೆ ಮನವಿ ಸಲ್ಲಿಸಿತ್ತು ಎಂದು ಸುದ್ದಿಯಾಗಿತ್ತು
"ಕೈರ್ನ್ ಎನರ್ಜಿ ಪ್ಯಾರಿಸ್ ನಲ್ಲಿ ಭಾರತ ಸರ್ಕಾರದ ಸರ್ಕಾರಿ ಸ್ವಾಮ್ಯದ ಆಸ್ತಿಯನ್ನು ವಶಪಡಿಸಿಕೊಂಡಿದೆ ಎಂಬ ವರದಿಗಳು ಪ್ರಕಟವಾಗಿದೆ. ಆದಾಗ್ಯೂ, ಭಾರತ ಸರ್ಕಾರ ಮಾತ್ರ ಯಾವುದೇ ಫ್ರೆಂಚ್ ನ್ಯಾಯಾಲಯದಿಂದ ಯಾವುದೇ ಸೂಚನೆ, ಆದೇಶ ಅಥವಾ ಸಂವಹನವನ್ನು ತಾವು ಸ್ವೀಕರಿಸಿಲ್ಲ. ಸರ್ಕಾರವು ಸತ್ಯವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದೆ" ಎಂದು ಹಣಕಾಸು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಪ್ಯಾರಿಸ್ ನಲ್ಲಿ ಭಾರತ ಸರ್ಕಾರಿ ಸ್ವಾಮ್ಯದ ಸುಮಾರು 20 ಮಿಲಿಯನ್ ಯೂರೋಗಳಷ್ಟು ಮೌಲ್ಯದ ಫ್ಲಾಟ್ ಗಳಿದ್ದು, ಇವೆಲ್ಲವೂ ಫ್ರಾನ್ಸ್ನಲ್ಲಿನ ಭಾರತ ಸರ್ಕಾರದ ಒಡೆತನ ಮತ್ತು ನಿಯಂತ್ರಣದಲ್ಲಿದೆ.