ಮುಂಬೈ, ಜು.08 (DaijiworldNews/HR): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದಲ್ಲಿ ಖಾಲಿ ಇದ್ದ ಸ್ಥಾನಗಳನ್ನು ಭರ್ತಿ ಮಾಡಲು ಮಾನವ ಸಂಪನ್ಮೂಲ ಒದಗಿಸಿದ್ದಕ್ಕೆ ಶಿವಸೇನಾಗೆ ಬಿಜೆಪಿಯು ಕೃತಜ್ಞತೆಗಳನ್ನು ಸಲ್ಲಿಸಬೇಕು ಎಂದು ಸಂಸದ ಸಂಜಯ್ ರಾವುತ್ ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, "ಕೇಂದ್ರದಲ್ಲಿ ಪಂಚಾಯತ್ ರಾಜ್ ಖಾತೆ ರಾಜ್ಯ ಸಚಿವರಾಗಿರುವ ಕಪೀಲ್ ಪಾಟೀಲ್ ಮತ್ತು ಆರೋಗ್ಯ ಖಾತೆ ರಾಜ್ಯ ಸಚಿವರಾಗಿರುವ ಭಾರತಿ ಪವಾರ್ ಅವರು ಎನ್ಸಿಪಿ ಜತೆಗಿದ್ದರು, ಇನ್ನು ಎಂಎಸ್ಎಂಇ ಖಾತೆ ಹೊಂದಿರುವ ಸಚಿವ ನಾರಾಯಣ ರಾಣೆ ಅವರು ಈ ಮೊದಲು ಶಿವಸೇನಾ ಮತ್ತು ಕಾಂಗ್ರೆಸ್ ಜತೆಗಿದ್ದವರು. ಮಹಾರಾಷ್ಟ್ರದ ನಾಲ್ವರು ಸಚಿವರಲ್ಲಿ ಮೂವರು ಬಿಜೆಪಿ ಮೂಲದವರಲ್ಲ" ಎಂದಿದ್ದಾರೆ.
ಇನ್ನು "ಮಹಾರಾಷ್ಟ್ರದ ನಾಲ್ವರು ಸಚಿವರಿಗೆ ಉತ್ತಮ ಖಾತೆಗಳನ್ನು ನೀಡಲಾಗಿದೆ. ಜನರ ಸೇವೆ ಮಾಡಲು ಉತ್ತಮ ಅವಕಾಶ ಕಲ್ಪಿಸಲಾಗಿದೆ. ಆದರೆ ನಾರಾಯಣ ರಾಣೆ ಅವರ ಸ್ಥಾನಮಾನ ದೊಡ್ಡದು. ಈ ಹಿಂದೆ ಅವರು ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಜತೆಗೆ, ಮಹತ್ವದ ಖಾತೆಗಳನ್ನು ಸಹ ನಿಭಾಯಿಸಿದ್ದಾರೆ" ಎಂದು ಹೇಳಿದ್ದಾರೆ.