ನವದೆಹಲಿ, ಜು.08 (DaijiworldNews/HR): ನೂತನ ಆರೋಗ್ಯ ಸಚಿವರು ಅಧಿಕಾರ ವಹಿಸಿಕೊಂಡ ಕೂಡಲೇ, ಏನಾದರೂ ಬದಲಾಗುತ್ತದೆಯೇ ಮತ್ತು ಲಸಿಕೆ ಕೊರತೆ ಇರುವುದಿಲ್ಲ ಅಲ್ಲವೇ? ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಟ್ವಿಟ್ಟರ್ನಲ್ಲಿ # ಚೇಂಜ್' ಎಂಬ ಹ್ಯಾಶ್ಟ್ಯಾಗ್ ಬಳಸಿ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ಮೊದಲಿಸಿಂದಲೂ ಸರ್ಕಾರದ ವ್ಯಾಕ್ಸಿನೇಷನ್ ನೀತಿಯನ್ನು ಟೀಕಿಸುತ್ತಿದ್ದು, ಲಸಿಕಾ ಅಭಿಯಾನವು ನಿಧಾನಗತಿಯಲ್ಲಿ ಸಾಗುತ್ತಿದೆ ಮತ್ತು ವೇಗವನ್ನು ಹೆಚ್ಚಿಸಬೇಕಾಗಿದೆ ಎಂದು ಆಗ್ರಹಿಸಿದರು.
ಇನ್ನು "ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಅವರ ಮೂಲಕ ರಾಹುಲ್ ಗಾಂಧಿಯವರನ್ನು 'ಕಾಂಗ್ರೆಸ್ ಮುಖ್ಯಸ್ಥರು 'ಬೇಜವಾಬ್ದಾರಿಯುತ' ಮತ್ತು ಹಾಗೆ ಮಾಡುವ ಕಾರಣಕ್ಕಾಗಿ ಟೀಕಿಸುತ್ತಿದ್ದಾರೆ' ಎಂದಿದೆ. ಆದಾಗ್ಯೂ, ಅವರ ರಚನಾತ್ಮಕ ಟೀಕೆಗಳನ್ನು ನಾವು ಸ್ವಾಗತಿಸುತ್ತೇವೆ" ಎಂದು ಭಾಟಿಯಾ ಹೇಳಿದರು.
ಮಾಜಿ ಆರೋಗ್ಯ ಸಚಿವ ಹರ್ಷವರ್ಧನ್ ಅವರನ್ನು ಕೈಬಿಡುವುದು ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿ ಸರ್ಕಾರವು ವಿಫಲವಾಗಿದೆ ಎಂದು ಕಾಂಗ್ರೆಸ್ ಈ ಹಿಂದೆ ಹೇಳಿದ್ದು, ಲಸಿಕೆ ಕೊರತೆಯನ್ನು ನೀಗಿಸುವುದು ಹೊಸ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರ ಮೊದಲ ಕಾರ್ಯವಾಗಿದೆ ಎಂದು ಈ ಹಿಂದೆ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಹೇಳಿದ್ದಾರೆ.