ಬೀದರ್, ಜು 08 (DaijiworldNews/PY): "ಇಬ್ಬರು ಏನು ಬೇಕಾದರೂ ಚರ್ಚೆ ಮಾಡಲಿ. ಆದರೆ, ಮಾತನಾಡುವ ವೇಳೆ ನೋಡಿಕೊಂಡು ಪದಗಳನ್ನು ಬಳಸಿ" ಎಂದು ಸಂಸದೆ ಹಾಗೂ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಸಚಿವ ಈಶ್ವರಪ್ಪ ಬುದ್ಧಿವಾದ ಹೇಳಿದ್ದಾರೆ.
ಈ ಬಗ್ಗೆ ಬೀದರ್ನಲ್ಲಿ ಮಾತನಾಡಿದ ಅವರು, "ಹೆಚ್ಡಿಕೆ ಹಾಗೂ ಸುಮಲತಾ ಅವರ ಸಮರಕ್ಕೆ ಯಾವ ಪದ ಬಳಕೆ ಮಾಡಬೇಕು ಎನ್ನುವುದು ನನಗೆ ತಿಳಿದಿಲ್ಲ. ಇಬ್ಬರು ಬಳಸುವ ಪದದಿಂದಾಗಿ ನನಗೆ ನೋವಾಗಿದೆ. ಇಬ್ಬರು ಏನೇ ಚರ್ಚೆ ಮಾಡಲಿ. ಆದರೆ, ನೋಡಿಕೊಂಡು ಪದಗಳ ಬಳಕೆ ಮಾಡಲಿ" ಎಂದಿದ್ದಾರೆ.
ಮೋದಿ ಸಂಪುಟದಲ್ಲಿ ರಾಜ್ಯದ ನಾಲ್ವರಿಗೆ ಮಂತ್ರಿ ಸ್ಥಾನ ದೊರೆತ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, "ದೇಶಕ್ಕೆ ಪ್ರಧಾನಿ ಮೋದಿ ಅವರು ಬಂಪರ್ ಕೊಡುಗೆ ನೀಡಿದ್ದಾರೆ. ದೇಶದ ಇತಿಹಾಸದಲ್ಲೇ ಹಿಂದುಳಿದ ವರ್ಗ ಸೇರಿದಂತೆ ಐಪಿಎಸ್, ಐಎಎಸ್. ದಲಿತ ಹಾಗೂ ಎಲ್ಲರಿಗೂ ಮಂತ್ರಿ ಮಂಡಲದಲ್ಲಿ ಪ್ರಧಾನಿ ಮೋದಿ ಅವರು ಅವಕಾಶ ನೀಡಿದ್ದಾರೆ" ಎಂದು ಹೇಳಿದ್ದಾರೆ.
"ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ ಕೇಂದ್ರ ಮಂತ್ರಿ ಮಂಡಲದಲ್ಲಿ ರಾಜ್ಯದ ಆರು ಮಂದಿಗೆ ಅವಕಾಶ ನೀಡಿದ್ದಾರೆ. ಈ ಮುಖೇನ ಪ್ರಧಾನಿ ಮೋದಿ ಅವರು ರಾಜ್ಯದ ಎಲ್ಲಾ ಭಾಗಗಳಿಗೆ ಕೊಡುಗೆ ನೀಡಿದ್ದು ವಿಶೇಷ. ಹಾಗಾಗಿ ಪ್ರಧಾನಿ ಮೋದಿ ಅವರಿಗೆ ನಾನು ರಾಜ್ಯದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ" ಎಂದು ತಿಳಿಸಿದ್ದಾರೆ.
"ಬಿಜೆಪಿಗೆ ಹೇಳೋರು ಕೇಳೋರು ಇದ್ದಾರೆ. ಆದರೆ, ಕಾಂಗ್ರೆಸ್ಗೆ ಹೇಳೋರು ಕೇಳೋರು ಯಾರು ಇಲ್ಲ. ಈ ಕಾರಣದಿಂದ ಕಾಂಗ್ರೆಸ್ನಲ್ಲಿ ನಾನೇ ಸಿಎಂ ಅಭ್ಯರ್ಥಿ ಎಂದು ಹೇಳುತ್ತಿದ್ದಾರೆ. ಬಿಜೆಪಿ ಶಿಸ್ತಿನ ಪಕ್ಷ" ಎಂದಿದ್ದಾರೆ.