ಬೆಳಗಾವಿ, ಜು 08 (DaijiworldNews/PY): "ಪ್ರಧಾನಿ ನರೇಂದ್ರ ಮೋದಿ ಅವರೇ ವಿಫಲರಾಗಿದ್ದು, ಇನ್ನು ಸಚಿವರಿಂದ ನಿರೀಕ್ಷೆ ಸಾಧ್ಯವಿಲ್ಲ" ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪ್ರಧಾನಿ ನರೇಂದ್ರ ಮೋದು ಅವರೇ ವಿಫಲರಾಗಿರುವಾಗ, ಸಚಿವರಿಂದ ನಿರೀಕ್ಷೆ ಅಸಾಧ್ಯವಾದುದು. ರಾಜ್ಯಕ್ಕೆ ನಾಲ್ಕು ಸಚಿವ ಸ್ಥಾನ ದೊರೆತಿರುವುದು ನಿಷ್ಪ್ರಯೋಜಕ" ಎಂದಿದ್ದಾರೆ.
"ಮೋದಿ ಸಂಪುಟದಲ್ಲಿ ರಾಜ್ಯದ ನಾಲ್ಕು ಮಂದಿಗೆ ಸಚಿವ ಸ್ಥಾನ ಸಿಕ್ಕಿದರೂ ರಾಜ್ಯಕ್ಕೆ ಯಾವುದೇ ಲಾಭವಿಲ್ಲ. ರಾಜ್ಯಕ್ಕೆ ನಾಲ್ಕು ಸಚಿವ ಸ್ಥಾನ ದೊರೆತಿರುವುದು ನಿಷ್ಪ್ರಯೋಜಕ" ಎಂದು ಹೇಳಿದ್ದಾರೆ.
"ಸಂಪುಟದಲ್ಲಿ ಅನಾನುಭವಿಗಳೇ ಹೆಚ್ಚಿರುವ ಕಾರಣ ಅಭಿವೃದ್ಧಿ ವೇಗ ಇನ್ನಷ್ಟು ಕುಂಠಿತವಾಗಲಿದೆ. ಇದಕ್ಕೂ ಮುನ್ನ ಕೇಂದ್ರದ ಅಭಿವೃದ್ಧಿ ಶೇ. 50 ರಷ್ಟು ಮಾತ್ರವೇ ಇತ್ತು. ಇನ್ನು ಮುಂದೆ ಇದರ ವೇಗ ಶೇ. 30ಕ್ಕೆ ಇಳಿಯಲಿದೆ. ಇನ್ನು ಮುಂದೆ ಮೋದಿ ಸರ್ಕಾರ ಪ್ಯಾಸೆಂಜರ್ ರೈಲಿನಿಂದಲೂ ನಿಧಾನವಾಗಿ ಓಡಲಿದೆ" ಎಂದಿದ್ದಾರೆ.