ಬೆಂಗಳೂರು, ಜು 08 (DaijiworldNews/PY): "ಪ್ರಸ್ತುತ ರಾಜಕಾರಣ ವಿಚಾರವಾಗಿ ಮಾತನಾಡಲು ಅಸಹ್ಯವಾಗುತ್ತಿದೆ. ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ಈ ರಾಜಕಾರಣವೇ ಬೇಡ ಎಂದೆನಿಸಿದೆ" ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ಕೇಂದ್ರ ಸಚಿವರಾಗಿದ್ದ ಡಿ.ವಿ.ಸದಾನಂದಗೌಡ ಅವರು ರಾಜ್ಯ ರಾಜಕಾರಣದತ್ತ ಬರುತ್ತಾರೆಯೇ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, "ನನ್ನ ಕ್ಷೇತ್ರದ ಬಗ್ಗೆ ಕೇಳಿದ್ದಲ್ಲಿ ನಾನು ಉತ್ತರಿಸುತ್ತೇನೆ. ಬದಲಾಗಿ ರಾಷ್ಟ್ರಮಟ್ಟದ ರಾಜಕಾರಣದ ವಿಚಾರವಾಗಿ ಮಾತನಾಡುವಷ್ಟು ದೊಡ್ಡವನು ನಾನಲ್ಲ" ಎಂದಿದ್ದಾರೆ.
"ಕೇಂದ್ರದ ನಾಯಕರು, ಪಕ್ಷದ ಬಗ್ಗೆ ಹಾಗೂ ನಾಯಕರ ಬಗ್ಗೆ ಮಾತನಾಡುವವರನ್ನು ಗಮನಿಸುತ್ತಾರೆ. ಯಾರೆಲ್ಲಾ ಮಾತನಾಡುತ್ತಾರೋ ಅವರ ವಿರುದ್ದ ಕ್ರಮ ಕೈಗೊಳ್ಳುತ್ತಾರೆ. ಕೇಂದ್ರದ ನಿಯೋಗದ ಬಳಿ ನಾವು ತೆಗೆದುಕೊಂಡು ಹೋಗಬೇಕೇ ಅಥವಾ ಬೇಡವೇ ಎನ್ನುವ ಬಗ್ಗೆ ಚರ್ಚೆ ನಡೆಸುತ್ತೇವೆ" ಎಂದು ತಿಳಿಸಿದ್ದಾರೆ.