ಮೈಸೂರು, ಜು 08 (DaijiworldNews/PY): "ರಾಜ್ಯದ ಜನತೆಯ ಸಂಕಷ್ಟ ದೂರವಾಗಬೇಕಾದರೆ ಮೊದಲು ಬಿಜೆಪಿ ಆಡಳಿತ ತೊಲಗಬೇಕು" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ, "ಕೊರೊನಾ ಸಂಕಷ್ಟದ ಸಂದರ್ಭ ಜನರಿಗೆ ನೆರವಾಗಲು ವಿಫಲವಾಗಿದೆ. ರಾಜ್ಯದ ಜನತೆಯ ಸಂಕಷ್ಟ ದೂರವಾಗಬೇಕಾದರೆ ಮೊದಲು ಬಿಜೆಪಿ ಆಡಳಿತ ತೊಲಗಬೇಕು. ನಾವು ಅಧಿಕಾರಕ್ಕೆ ಬರುವುದು ಮುಖ್ಯವಲ್ಲ. ಆದರೆ, ರಾಜ್ಯ ಉಳಿಯುವುದು ಮುಖ್ಯ" ಎಂದಿದ್ದಾರೆ.
"ಸಹಾಯ ಹಸ್ತ ಕಾರ್ಯಕ್ರಮದ ಮುಖೇನ ಕಾಂಗ್ರೆಸ್ ಪಕ್ಷ ಜನರ ನೋವಿಗೆ ಸ್ಪಂದಿಸಲು ಮುಂದಾಗಿದೆ. ಕೊರೊನಾದಿಂದ ಸಾವನ್ನಪ್ಪಿದವರ ಮನೆಗೆ ಬೇಟಿ ನೀಡಿ ಸಾಂತ್ವಾನ ಹೇಳಲಿದೆ. ಒಂದು ನಮ್ಮ ಸರ್ಕಾರ ಅಧಿಕಾರದಲ್ಲಿ ಇರುತ್ತಿದ್ದರೆ, ಬಿಪಿಎಲ್ ಕುಟುಂಬಕ್ಕೆ 10 ಸಾವಿರ ರೂ. ಸಹಾಯಧನ ಹಾಗೂ ಪ್ರತೀ ತಿಂಗಳು ತಲಾ 10 ಕೆ.ಜಿ ಅಕ್ಕಿ ವಿತರಿಸುತ್ತಿದ್ದೆವು" ಎಂದು ತಿಳಿಸಿದ್ದಾರೆ.