ನವದೆಹಲಿ, ಜು 07 (DaijiworldNews/PY): ಪ್ರಧಾನಿ ನರೇಂದ್ರ ಮೋದಿ ಅವರ ಎರಡನೇ ಅವಧಿಯ ಮೊದಲ ಬೃಹತ್ ಸಂಪುಟ ಪುರ್ನರಚನೆಯ ಮುನ್ನ ಸಚಿವರಾದ ಡಿವಿ ಸದಾನಂದಗೌಡ ಸೇರಿದಂತೆ ಸಂತೋಷ್ ಗಂಗ್ವಾರ್, ರಮೇಶ್ ಪೋಖ್ರಿಯಾಲ್ ನಿಶಾಂಕ್ ಹಾಗೂ ದೇಬಶ್ರೀ ಚೌಧರಿ ಅವರು ಬುಧವಾರ ರಾಜೀನಾಮೆ ನೀಡಿದ್ದಾರೆ.
ಜ್ಯೋತಿರಾಧಿತ್ಯ ಸಿಂಧಿಯಾ ಸೇರಿದಂತೆ ಸರ್ಬಾನಂದ ಸೋನೊವಾಲ್, ನಾರಾಯಣ್ ರಾಣೆ ಹಾಗೂ ಪಶುಪತಿನಾಥ್ [ರಾಸ್ ಅವರ ಹೆಸರುಗಳು ನೂತನ ಸಂಪುಟಕ್ಕೆ ಸೇರ್ಪಡೆಯಾಗಲಿವೆ ಎಂದು ಕೇಳಿ ಬರುತ್ತಿದೆ.
ತಮ್ಮ ಸಚಿವ ಸ್ಥಾನಕ್ಕೆ ಕೇಂದ್ರ ಶಿಕ್ಷಣ ಸಚಿವರಾಗಿದ್ದಂತ ರಮೇಶ್ ಪೋಖ್ರಿಯಾಲ್ ಅವರು ರಾಜೀನಾಮೆ ನೀಡಿದ್ದಾರೆ. ಅಲ್ಲದೇ, 43 ನೂತನ ಸಚಿವರು ಇಂದು ಮೋದಿ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ.
ಇದು ಅತ್ಯಂತ ಕಿರಿಯ ಕ್ಯಾಬಿನೆಟ್ ಆಗಿರುತ್ತದೆ. ಒಬಿಸಿಗಳು, ಎಸ್ಸಿಗಳು ಹಾಗೂ ಎಸ್ಟಿಗಳ ದಾಖಲೆಯ ಪ್ರಾತಿನಿಧ್ಯ, ಹೆಚ್ಚಿನ ಮಹಿಳಾ ಆಯ್ಕೆಗಳನ್ನು ಹೊಂದಿರುತ್ತದೆ. ಇಂದು ಸಂಜೆ 6 ಗಂಟೆಗೆ ಘೋಷಿಸಲಿರುವ ಹೊಸ ಸಚಿವ ಸಂಪುಟವು, ಹಿಂದುಳಿದ ಮತ್ತು ಬುಡಕಟ್ಟು ಸಮುದಾಯಗಳ ಪ್ರಾತಿನಿಧ್ಯದ ಬಗ್ಗೆ ವಿಶೇಷ ಗಮನ ಹರಿಸಲಿದೆ ಎಂದು ಮೂಲಗಳು ತಿಳಿಸಿವೆ.