ನವದೆಹಲಿ, ಜು 07 (DaijiworldNews/PY): ಇಂಧನ ಬೆಲೆ ಏರಿಕೆ ಬಗ್ಗೆ ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, "ಮೋದಿ ಸರ್ಕಾರದ ಆಡಳಿತ ತೆರಿಗೆ ವಸೂಲಿ ಮೇಲೆಯೇ ನಡೆಯುತ್ತಿದೆ" ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ನಿಮ್ಮ ಕಾರು ಪೆಟ್ರೋಲ್ ಅಥವಾ ಡೀಸೆಲ್ನಲ್ಲಿ ಚಲಿಸುತ್ತಿದೆಯಾದರೆ, ಮೋದಿ ಸರ್ಕಾರದ ಆಡಳಿತ ತೆರಿಗೆ ವಸೂಲಿ ಮೇಲೆ ನಡೆಯುತ್ತಿದೆ" ಎಂದು ಟೀಕಿಸಿದ್ದಾರೆ.
ಅಬಕಾರಿ ಸುಂಕ, ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆಗಳ ಮೂಲಕ ಸರ್ಕಾರರು ನೂರಾರು ಕೋಟಿ ರೂ. ವಸೂಲಿ ಮಾಡುತ್ತಿದೆ ಈ ಕಾರಣದಿಂ ಇಂಧನ ಬೆಲೆಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಲೇ ಇದೆ.
ಬುಧವಾರ ದೆಹಲಿಯಲ್ಲಿ ಪೆಟ್ರೋಲ್ ದರ 100 ರೂ. ದಾಟಿದ ನಂತರ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ.