ಹಂದ್ವಾರ, ಜು 07 (DaijiworldNews/PY): ಜಮ್ಮು-ಕಾಶ್ಮೀರದ ಹಂದ್ವಾರದಲ್ಲಿ ನಡೆದ ಎನ್ಕೌಂಟರ್ನಲ್ಲಿ ಉಗ್ರ ಸಂಘಟನೆಯ ಟಾಪ್ ಕಮಾಂಡರ್ ಸೇರಿದಂತೆ ಇಬ್ಬರನ್ನು ಸದೆಬಡಿಯಲಾಗಿದೆ ಎನ್ನಲಾಗಿದೆ.
ಹಲ್ವಾಯಿ ಅಲಿಯಾಸ್ ಉಬೈದ್, ಬುರ್ಹಾನ್ ವಾನಿ ಎನ್ನುವ ಉಗ್ರರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಉಗ್ರ ಬುರ್ಹಾನ್ ವಾನಿ ಸಹ ಹಲವು ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು, ದಕ್ಷಿಣ ಕಾಶ್ಮೀರದಲ್ಲಿ ಹಲವು ಅಧಿಕಾರಿಗಳ ಹಾಗೂ ನಾಗರೀಕರ ಹತ್ಯೆಗೆ ಈತ ಕಾರಣನಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಾಶ್ಮೀರದ ಐಜಿಪಿ ವಿಜಯ್ ಕುಮಾರ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, "ಹಲ್ವಾಯಿ ಅಲಿಯಾಸ್ ಉಬೈದ್ ಅನ್ನು ಹತ್ಯೆ ಮಾಡಿರುವುದು ನಮಗೆ ಬಹುದೊಡ್ಡ ಯಶಸ್ಸು ಸಿಕ್ಕಿದಂತಾಗಿದೆ" ಎಂದಿದ್ದಾರೆ.
ಈತ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಟಾಪ್ ಕಮಾಂಡರ್ ಹಾಗೂ ಹಳೆ ಉಗ್ರನಾಗಿದ್ದು, ಇಂದು ನಡೆದ ಎನ್ಕೌಂಟರ್ನಲ್ಲಿ ಹತ್ಯೆಗೈಯಲಾಗಿದೆ.