ನವದೆಹಲಿ, ಜು 07 (DaijiworldNews/MS): ಕೇಂದ್ರದ ಮಾಜಿ ಸಚಿವ ಪಿ.ಆರ್.ಕುಮಾರಮಂಗಲಂ ಅವರ ಪತ್ನಿಯನ್ನು ದೆಹಲಿಯ ಮನೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ರಾತ್ರಿ ಕಿಟ್ಟಿ ಕುಮಾರಮಂಗಲಂ (67)ಅವರು ತಮ್ಮ ದಕ್ಷಿಣ ದೆಹಲಿಯ ವಸಂತ್ ವಿಹಾರದ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆರಂಭಿಕ ತನಿಖೆಯ ಪ್ರಕಾರ ಅವಳು ದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಕಿಟ್ಟಿ ಕುಮಾರಮಂಗಲಂ ಅವರ ನಿವಾಸದಲ್ಲಿ ಕೆಲಸ ಮಾಡುತ್ತಿದ್ದ ದೋಬಿ 24 ವರ್ಷದ ರಾಜು ಲಕ್ಕನ್ ಎಂಬಾತ ರಾತ್ರಿ 9 ಗಂಟೆ ಸುಮಾರಿಗೆ ತನ್ನ ಸಹಚರರೊಂದಿಗೆ ಮನೆ ಪ್ರವೇಶಿಸಿದ್ದು, ಈ ಸಂದರ್ಭದಲ್ಲಿ ಮನೆಯಲ್ಲಿದ್ದ ಮಂಜು ಎಂಬಾಕೆಯನ್ನು ಒತ್ತೆಯಾಳಾಗಿ ಕೊಠಡಿಯೊಂದರಲ್ಲಿ ಕೂಡಿ ಹಾಕಿದ್ದಾರೆ. ಬಳಿಕ ಕಿಟ್ಟಿ ಕುಮಾರಮಂಗಲಂ ಅವರನ್ನು ಹತ್ಯೆಗೈದು ಹಣ ಹಾಗೂ ಆಭರಣ ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಮುಖ್ಯ ಆರೋಪಿಗಳನ್ನು ಬಂಧಿಸಲಾಗಿದ್ದರೂ, ಅವರಿಗೆ ಸಹಾಯ ಮಾಡಿದ ಇತರ ಇಬ್ಬರು ಇನ್ನೂ ಕಾಣೆಯಾಗಿದ್ದಾರೆ.
ಕಿಟ್ಟಿ ಮಂಗಲಂ ಸುಪ್ರೀಂಕೋರ್ಟ್ನಲ್ಲಿ ವಕೀಲರಾಗಿ ವೃತ್ತಿ ನಿರ್ವಹಿಸಿದ್ದರು. ಅವರ ಪುತ್ರ ಕಾಂಗ್ರೆಸ್ ಮುಖಂಡರಾಗಿದ್ದಾರೆ. ಈ ಘಟನೆ ಕುರಿತು ಶೀಘ್ರವೇ ಮಾಹಿತಿ ಕಲೆ ಹಾಕಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಅವರ ಪತಿ ಪಿಆರ್ ಕುಮಾರಮಂಗಲಂ ಅವರು ಪಿವಿ ನರಸಿಂಹರಾವ್ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಬಿಜೆಪಿಗೆ ಸೇರ್ಪಡೆಯಾಗಿದ್ದರು. ವಾಜಪೇಯಿ ಸರ್ಕಾರದಕ್ಕೂ ಸಚಿವರಾಗಿದ್ದರು.