ತುಮಕೂರು, ಜು 05 (DaijiworldNews/MS): ಕೆ.ಆರ್.ಎಸ್ ಡ್ಯಾಂ ನಿಂದ ನೀರು ಸೋರಿಕೆಯಾಗುತ್ತಿಲ್ಲ. ಅಲ್ಲದೆ ಕೆ ಆರ್ಎಸ್ ಜಲಾಶಯದಲ್ಲಿ ಯಾವುದೇ ಬಿರುಕು, ಲೀಕೆಜ್ ಇಲ್ಲ. ಈ ಬಗ್ಗೆ ಯಾರೂ ಆತಂಕ ಪಡುವ ಅಗತ್ಯವೂ ಇಲ್ಲ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಸ್ಪಷ್ಟಪಡಿಸಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಸಚಿವರು, ಕೆ.ಆರ್.ಎಸ್ ನ 10 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ಮುಚ್ಚಲಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ನೋಟೀಸ್ ನೀಡಿ ಮುಚ್ಚಲಾಗಿದೆ. ಕಳೆದ 3-4 ದಿನಗಳಿಂದ ಯಾವುದೆ ಗಣಿಗಾರಿಕೆ ನಡೆಯುತ್ತಿಲ್ಲ ರೈತರಾಗಲಿ, ರಾಜ್ಯದ ಜನರಾಗಲಿ ಯಾರೂ ಆತಂಕ ಪಡಬೇಕಿಲ್ಲ ಎಂದು ಸ್ಪಷ್ಟಪಡಿಸಿದರು.
ಕೆಆರ್ಎಸ್ ಸುತ್ತಮುತ್ತ ನಡೆದಿರುವ ಅಕ್ರಮ ಗಣಿಗಾರಿಕೆಯಿಂದ ಜಿಲ್ಲೆಯ ಜೀವನಾಡಿ ಕೃಷ್ಣರಾಜಸಾಗರ ಜಲಾಶಯ ಬಿರುಕು ಬಿಟ್ಟನಿಜ . ಆದರೆ, ತನಿಖೆಗೆ ಸ್ಥಳೀಯ ರಾಜಕಾರಣ ಅಡ್ಡಿಯಾಗಿ ನಿಂತಿದೆ ಎಂದು ಸಂಸದೆ ಸುಮಲತಾ ಹೇಳಿಕೆ ನೀಡಿದ್ದರು. ಈ ವಿಚಾರವಾಗಿ ನಿರಾಣಿ ಸ್ಪಷ್ಟನೆ ನೀಡಿದ್ದಾರೆ.
ಇನ್ನು ಸಂಸದೆ ಸುಮಲತಾ ಹೇಳಿಕೆ " ನೀರು ಹೋಗದಂತೆ ಸುಮಲತಾ ಅವರನ್ನು ಅಡ್ಡ ಮಲಗಿಸಬೇಕು" ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವ್ಯಂಗವಾಡಿದ್ದರು.
ಇದಕ್ಕೆ ತಿರುಗೇಟು ನೀಡಿದ್ದ ಸಂಸದೆ ಕೆಆರ್ಎಸ್ ಜಲಾಶಯದ ರಕ್ಷಣೆ ನನ್ನ ಉದ್ದೇಶ. ನನಗೆ ಬಂದ ಮಾಹಿತಿಯ ಪ್ರಕಾರ ಜಲಾಶಯದ ಉಳಿವಿಗಾಗಿ ಕೆಲಸ ಮಾಡುವುದು ನನ್ನ ಕರ್ತವ್ಯವಾಗಿದೆ.ಎರಡು ಬಾರಿ ಸಿಎಂ ಆದವರಿಗೆ ಹೆಣ್ಣುಮಕ್ಕಳ ಬಗ್ಗೆ ಗೌರವ ಎಷ್ಟಿದೆ ಎಂದು ತಿಳಿಯುತ್ತದೆ ಎಂದು ಹೇಳಿದ್ದರು.