ಬೆಂಗಳೂರು, ಜು 05 (DaijiworldNews/MS):ಹಿರಿಯ ಕಾಂಗ್ರೆಸ್ ಮುಖಂಡ,ಕೆಪಿಸಿಸಿ ಕಾರ್ಯಾಧ್ಯಕ್ಷ ಬಿಟಿಎಂ ಲೇಔಟ್ ಕ್ಷೇತ್ರದ ಶಾಸಕ ರಾಮಲಿಂಗರೆಡ್ಡಿ ಹಾಗೂ ಸಂಸದ ತೇಜಸ್ವಿಸೂರ್ಯ ಒಂದೇ ವೇದಿಕೆಯಲ್ಲಿ ಕುಳಿತು ಕ್ಷೇತ್ರದ ಜನತೆಯ ಅಹವಾಲು ಸ್ವೀಕರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಪಕ್ಷ ಬೇಧ ಮರೆತು ಜೊತೆಯಾಗಿ ಕೆಲಸ ಮಾಡಿರುವುದು ಜನತೆಗೆ ಖುಷಿ ನೀಡಿದೆ.
ತೇಜಸ್ವಿ ಸೂರ್ಯ ಕ್ಶೇತ್ರದ ಬಿಜೆಪಿ ಸಂಸದರಾಗಿದ್ದು, ರಾಮಲಿಂಗಾರೆಡ್ಡಿ ಕಾಂಗ್ರೆಸ್ನ ಶಾಸಕರಾಗಿದ್ದು ಈ ಇಬ್ಬರೂ ನಾಯಕರು ಕೋರಮಂಗಲದಲ್ಲಿಂದು ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.
ಮೂಲಸೌಲಭ್ಯ, ನೈರ್ಮಲ್ಯತೆ, ಸೌಲಭ್ಯಗಳ ಅಭಿವೃದ್ದಿ ಸೇರಿದಂತೆ ನಾನಾ ರೀತಿಯ ಸಮಸ್ಯೆಗಳುಬಗ್ಗೆ . ಪ್ರಜ್ಞಾವಂತರು, ಹಿರಿಯ ನಾಗರಿಕರು, ಸಭೆಯಲ್ಲಿ ಭಾಗವಹಿಸಿದ್ದರು. ರಾಜಕೀಯದ ಸೋಂಕಿಲ್ಲದ ನಿಷ್ಪಪಕ್ಷಪಾತವಾಗಿ ಜನರ ಸಮಸ್ಯೆಗೆ ಸ್ಪಂದಿಸಿದ ಈ ಕಾರ್ಯಕ್ರಮ ಮೆಚ್ಚುಗೆಗೆ ಪಾತ್ರವಾಗಿತ್ತು.