ಬೆಂಗಳೂರು, ಜು 05 (DaijiworldNews/PY): "ಸಿಎಂ ಯಡಿಯೂರಪ್ಪ ಕುತ್ತಾ ಎಂದು ಹೇಳಿಕೆ ನೀಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ನಾಯಿ, ಸಿಂಹವನ್ನೂ ನಾಯಿ ಎಂದೇ ಭಾವಿಸುತ್ತದೆ" ಎಂದಿದ್ದಾರೆ.
"ಸಿದ್ದರಾಮಯ್ಯ ಅವರು ಯಡಿಯೂರಪ್ಪ ಅವರ ಬಗ್ಗೆ ಮನಬಂದಂತೆ ಮಾತನಾಡಿದ್ದಾರೆ. ಇದು ಸಿದ್ದರಾಮಯ್ಯ ಅವರ ತಪ್ಪು. ಯಡಿಯೂರಪ್ಪ ಅವರು ಸಿಂಹವೇ. ಸಿದ್ದರಾಮಯ್ಯ ನಾಯಿಯಾಗಿ ನಾಯಿ ಎಂದೇ ಭಾವಿಸಿದ್ದಾರೆ. ಸಿಎಂ ಬಿಎಸ್ವೈ ಅವರು ದೆಹಲಿಗೆ ಹೋದರೂ ಸಿಂಹವೇ ಇಲ್ಲಿ ಇದ್ದರೂ ಸಿಂಹವೇ. ಸಿಂಹ ಯಾರು, ನಾಯಿ ಯಾರು ಎಂದು ಜನರು ನಿರ್ಧರಿಸಿದ್ದಾರೆ" ಎಂದು ತಿರುಗೇಟು ನೀಡಿದ್ದಾರೆ.
"ಯಡಿಯೂರಪ್ಪ ಅವರು ದೆಹಲಿಯಲ್ಲೇ ಇರಲಿ ಅಥವಾ ರಾಜ್ಯದಲ್ಲೀ ಇರಲಿ ಅವರು ಸಿಂಹವೇ. ಸಿಂಹದ ಘರ್ಜನೆ ಎಲ್ಲಾ ಕಡೆಯೂ ಕೇಳಿಸುತ್ತದೆ. ಸಿದ್ದರಾಮಯ್ಯ ಅವರಿಗೆ ಸಭ್ಯತೆ ನಾಗರೀಕತೆ ಇಲ್ಲ" ಎಂದಿದ್ದಾರೆ.
"ಈ ರೀತಿಯಾದ ಮಾತು ಸಿದ್ದರಾಮಯ್ಯ ಅವರ ಸ್ಥಾನಕ್ಕೆ ಯೋಗ್ಯವಾದುದಲ್ಲ. ಪ್ರಧಾನ ಮಂತ್ರಿ ಬಗ್ಗೆಯೂ ಹೀಗೆ ಮಾತನಾಡುವುದು ಕಾಂಗ್ರೆಸ್ನ ಕೆಟ್ಟ ಸಂಸ್ಕೃತಿ. ಈ ಕೆಟ್ಟ ಸಂಸ್ಕೃತಿಯನ್ನು ಬಿಟ್ಟು ನಾಗರೀಕತೆ ಕಲೆಯುವುದು ಉತ್ತಮ" ಎಂದು ಹೇಳಿದ್ದಾರೆ.
"ತಮ್ಮ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರಿಗೆ ಗುರುತು ಮಾಡಿಕೊಳ್ಳಲು ಆಗಲಿಲ್ಲ. ತಮ್ಮ ಸೀಟು ಉಳಿಸಿಕೊಳ್ಳುವ ಸಲುವಾಗಿ ಅವರು ಬಾದಾಮಿಗೆ ಓಡಿದರು. ಧಮ್ ಇದ್ದರೆ ಸಿದ್ದರಾಮಯ್ಯ ಬಾದಾಮಿಯಲ್ಲಿ ಸ್ಪರ್ಧಿಸಲಿ" ಎಂದು ಸವಾಲು ಹಾಕಿದ್ದಾರೆ.