ನವದೆಹಲಿ,ಜು.05 (DaijiworldNews/HR): ಎಲ್ಗಾರ್ ಪರಿಷತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿದ್ದ ಬುಡಕಟ್ಟು ಹಕ್ಕುಗಳ ಕಾರ್ಯಕರ್ತ ಫಾದರ್ ಸ್ಟಾನ್ ಸ್ವಾಮಿ(84) ಸೋಮವಾರ ಮಧ್ಯಾಹ್ನ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ಸ್ಟಾನ್ ಸ್ವಾಮಿ ಅವರಿಗೆ ಭಾನುವಾರದಂದು ಆರೋಗ್ಯವು ಹದಗೆಟ್ಟಿದ್ದು, ಬಳಿಕ ವೆಂಟಿಲೇಟರ್ನಲ್ಲಿ ಇರಿಸಲಾಗಿತ್ತು ಎನ್ನಲಾಗಿದೆ.
ಇನ್ನು ಸ್ವಾಮಿಯವರ ವೈದ್ಯಕೀಯ ಜಾಮೀನು ಅರ್ಜಿಯ ಕುರಿತು ತುರ್ತು ವಿಚಾರಣೆ ಕೋರಿ ಅವರ ವಕೀಲ ದೇಸಾಯುಯವರು ಸೋಮವಾರ ಬೆಳಿಗ್ಗೆ ಬಾಂಬೆ ಹೈಕೋರ್ಟ್ಗೆ ಮೊರೆ ಹೋಗಿದ್ದರು.
ಬಾಂಬೆ ಹೈಕೋರ್ಟ್ನ ನಿರ್ದೇಶನದ ಮೇರೆಗೆ ಸ್ವಾಮಿ ಅವರನ್ನು ಮೇ 30 ರಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶನಿವಾರ ವಕೀಲ ಮಿಹಿರ್ ದೇಸಾಯಿ ಅವರು ಸ್ವಾಮಿಯ ಜಾಮೀನು ಅರ್ಜಿಯನ್ನು ಆಲಿಸುತ್ತಿರುವ ಹೈಕೋರ್ಟ್ಗೆ ತಿಳಿಸಿದ್ದರು, ಬಳಿಕ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಮುಂದುವರೆದಿದ್ದರು.
ಮಧ್ಯರಾತ್ರಿಯ ನಂತರ, ದೇಸಾಯಿ ಭಾನುವಾರ, ಸ್ವಾಮಿಯ ಆರೋಗ್ಯ ಸ್ಥಿತಿ ಹದಗೆಟ್ಟಿದೆ ಮತ್ತು ಅವರನ್ನು ವೆಂಟಿಲೇಟರ್ ಮೇಲೆ ಇರಿಸಲಾಗಿದೆ. 'ಅವರ ಆರೋಗ್ಯವು ಹದಗೆಟ್ಟಿದೆ ಮತ್ತು ಅವರ ಆಮ್ಲಜನಕದ ಮಟ್ಟವು ಏರಿಳಿತವಾಗಿದ್ದರಿಂದ ಅವರಿಗೆ ಉಸಿರಾಡಲು ತೊಂದರೆಯಾಗಿದೆ' ಎಂದು ದೇಸಾಯಿ ಭಾನುವಾರ ಹೇಳಿದ್ದರು.