ನವದೆಹಲಿ, ಜು 05 (DaijiworldNews/PY): ರಫೇಲ್ ಯುದ್ಧವಿಮಾನಗಳ ಖರೀದಿಯಲ್ಲಿ ಅವ್ಯಹಾರ ನಡೆದಿದೆ ಎನ್ನುವ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿರುವ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ, "ವಾಯುಪಡೆಯ ಸಾಮರ್ಥ್ಯ ಕುಗ್ಗಿದ್ದ ಸಂದರ್ಭ ಕಾಂಗ್ರೆಸ್ ನೇತೃತ್ವದ ಸರ್ಕಾರವಿತ್ತು. ಕಾಂಗ್ರೆಸ್ ಹತ್ತು ವರ್ಷಗಳ ಕಾಲ ಆಡಳಿತ ನಡೆಸಿದ್ದು, ಆ ವೇಳೆ ಏಕೆ ಯುದ್ಧ ವಿಮಾನಗಳನ್ನು ಖರೀದಿ ಮಾಡಿಲ್ಲ?" ಎಂದು ಕೇಳಿದ್ದಾರೆ.
"ಗಾಂಧಿ ಕುಟುಂಬ ನಿರೀಕ್ಷೆ ಮಾಡಿದಷ್ಟು ಕಮಿಷನ್ ಅವರಿಗೆ ಸಿಕ್ಕಿಲ್ಲ. ಈ ಕಾರಣಕ್ಕೆ ಕಾಂಗ್ರೆಸ್ ನೇತೃತ್ವದ ಆಗಿನ ಸರ್ಕಾರ ಯುದ್ದ ವಿಮಾನಗಳನ್ನು ಖರೀಸದಿಸಿಲ್ಲವೇ?" ಎಂದು ಪ್ರಶ್ನಿಸಿದ್ದಾರೆ.
"ದೇಶದ ಭದ್ರತೆಯನ್ನು ಅಪಾಯಕ್ಕೆ ಸಿಲುಕಿಸಲಾಗಿದೆ ಎಂದು ಈಗ ಕಾಂಗ್ರೆಸ್ ಮಾಡುವ ಆರೋಪಕ್ಕೆ ಯಾವುದೇ ರೀತಿಯಾದ ಅರ್ಥವಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಕೈ ಮುಖಂಡರು ಈ ವಿಚಾರವನ್ನು ಮುಂದಿಟ್ಟುಕೊಂಡು ಪ್ರಧಾನಿ ಅವರಿಗೆ ಟೀಕೆ ಮಾಡುವುದು, ಅವರ ಮುಖಚರ್ಯೆ ಹಾಗೂ ಗಡ್ಡದ ಕುರಿತು ಮಾತನಾಡುವುದು ಆಶ್ಚರ್ಯವಾಗುತ್ತಿದೆ" ಎಂದಿದ್ದಾರೆ.