ಬೆಂಗಳೂರು, ಜು 05 (DaijiworldNews/MS): ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು ದಿಢೀರ್ ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಇವರಿಬ್ಬರ ಭೇಟಿ ತೀವ್ರ ಕುತೂಹಲ ಮೂಡಿಸಿದೆ.
ಹೆಚ್ಡಿಕೆ ಮಂಡ್ಯ ಜಿಲ್ಲೆಯ ಶಾಸಕರೊಂದಿಗೆ ಇಂದು ಬೆಳಿಗ್ಗೆ ಸಿಎಂ ಅಧಿಕೃತ ನಿವಾಸ ಕೃಷ್ಣಾದಲ್ಲಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿ ಮತ್ತೆ ಜೆಡಿಎಸ್ ಬಿಜೆಪಿ ಪಕ್ಷಕ್ಕೆ ಸಾಥ್ ನೀಡಲಿದೆಯೇ ಎನ್ನುವ ಕುತೂಹಲವನ್ನು ಹುಟ್ಟುಹಾಕಿದೆ.
ಸಿಎಂ ಯಡಿಯೂರಪ್ಪ ಭೇಟಿ ಬಳಿಕ ಮಾತನಾಡಿದಂತ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಯವರು, " ಮಂಡ್ಯದ ಪ್ರಸಿದ್ದ ಕಾರ್ಖಾನೆ ಮೈ ಶುಗರ್ ಖಾಸಗೀಕರಣ ಮಾಡಲಾಗುತ್ತಿದೆ ಎಂಬುದಾಗಿ ಜಿಲ್ಲೆಯ ರೈತರು ದೂರಿದ್ದು , ಈ ಬಗ್ಗೆ ಸಿಎಂ ಅವರ್ಸೊಂದಿಗೆ ಚರ್ಚಿಸುವಂತೆ ತಿಳಿಸಿದ್ದರು. ಹೀಗಾಗಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ" ಎಂದು ವಿವರಿಸಿದರು.
"ಮೈ ಶುಗರ್ ಕಾರ್ಖಾನೆ ಜಿಲ್ಲೆಯ ಪ್ರಸಿದ್ಧ ಶುಗರ್ ಕಾರ್ಖಾನೆಗಳಲ್ಲಿ ಒಂದಾಗಿದೆ. ಇಂತಹ ಕಾರ್ಖಾನೆಯಲ್ಲಿ ತೆರೆಮರೆಯಲ್ಲಿ ಖಾಸಗೀಕರಣ ಮಾಡೋದು ಸರಿಯಲ್ಲ ಎಂಬುದಾಗಿ ಸಿಎಂ ಅವರಲ್ಲಿ ಮನವರಿಕೆ ಮಾಡಿದ್ದು , ಮುಖ್ಯಮಂತ್ರಿಗಳು ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ" ಎಂದು ಹೇಳಿದರು.