ನವದೆಹಲಿ, ಜು 05 (DaijiworldNews/PY): ರಾಷ್ಟ್ರಾದ್ಯಂತ ಕೊರೊನಾ ವಿರುದ್ದ ಲಸಿಕೆ ನೀಡಲು ಪ್ರಾರಂಭಿಸಲಾದ ಕೊರೊನಾ ಕಾರ್ಯಕ್ರಮವನ್ನು ಜಾಗತಿಕ ಮಟ್ಟಕ್ಕೆ ವಿಸ್ತರಣೆ ಮಾಡಲು, ಜುಲೈ 5ರಂದು ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸಮಾವೇಶದಲ್ಲಿ ಭಾಷಣ ಮಾಡಲಿದ್ದಾರೆ.
"ಜುಲೈ 5ರಂದು ಸಂಜೆ 3 ಗಂಟೆಗೆ ಕೋವಿನ್ ಜಾಗತಿಕ ಸಮಾವೇಶ ನಡೆಯಲಿದೆ. ಇದು ಭಾರತೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹಾಗೂ ರಾಷ್ಟ್ರೀಯ ಆರೋಗ್ಯ ಸಮಿತಿಯ ಸಹಯೋಗದಲ್ಲಿ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಕಾರ್ಯಕ್ರಮದಲ್ಲಿ ವಿಶೇಷವಾದ ಸಂದೇಶವನ್ನು ಹಂಚಿಕೊಳ್ಳಲಿದ್ದಾರೆ" ಎಂದು ರಾಷ್ಟ್ರೀಯ ಆರೋಗ್ಯ ಸಮಿತಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
"ಕೋವಿನ್ ಎಂಬ ಡಿಜಿಟಲ್ ಪ್ಲಾಟ್ಫಾರ್ಮ್ ಅನ್ನು ಅಳವಡಿಸಿಕೊಳ್ಳಲು ಕೆನಡಾ ಸೇರಿದಂತೆ ಮೆಕ್ಸಿಕೊ, ನೈಜೀರಿಯಾ, ಪನಾಮ, ಉಗಾಂಡಾ ಹಾಗೂ ಸುಮಾರು 50 ದೇಶಗಳು ತಮ್ಮ ಲಸಿಕೆ ಅಭಿಯಾನ ನಡೆಸಲು ಆಸಕ್ತಿ ತೋರಿಸಿವೆ. ಭಾರತ ಓಪನ್ ಸೋರ್ಸ್ ಸಾಫ್ಟ್ವೇರ್ ಅನ್ನು ಉಚಿತವಾಗಿ ಹಂಚಿಕೊಳ್ಳಲು ತಯಾರಾಗಿದೆ" ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ (ಎನ್ಎಚ್ಎ) ಸಿಇಒ ಡಾ.ಆರ್.ಎಸ್. ಶರ್ಮಾ ತಿಳಿಸಿದ್ದರು.
ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ವರ್ಚುವಲ್ ವರ್ಚುವಲ್ ಕಾನ್ಕ್ಲೇವ್ ಅನ್ನು ಉದ್ಘಾಟಿಸಲಿದ್ದಾರೆ. ಈ ವೇಳೆ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ, ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹಾಗೂ ಡಾ.ಶರ್ಮಾ ಅವರೂ ಮಾತನಾಡಲಿದ್ದಾರೆ.