ಘಾಜಿಯಾಬಾದ್, ಜು 05 (DaijiworldNews/PY): "ಯಾರಾದರೂ ಮುಸ್ಲಿಮರು ಇಲ್ಲಿರಬಾರದು ಎಂದು ಹೇಳಿದರೆ ಅಂತಹ ವ್ಯಕ್ತಿ ಹಿಂದೂವೇ ಅಲ್ಲ" ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಘಾಜಿಯಾಬಾದ್ನಲ್ಲಿ ಮುಸ್ಲಿಂ ರಾಷ್ಟ್ರೀಯ ಮಂಚ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಧರ್ಮ ಯಾವುದೇ ಆದರೂ, ಎಲ್ಲಾ ಭಾರತೀಯರ ಡಿಎನ್ಎ ಒಂದೇ. ನಾವು ಇಲ್ಲಿ ಹಿಂದೂ ಅಥವಾ ಮುಸ್ಲಿಂ ಎಂದು ಪ್ರಾಬಲ್ಯ ಸಾಧಿಸಲು ಆಗುವುದಿಲ್ಲ. ನಾವು ಭಾರತೀಯರು ಎನ್ನುವ ಪ್ರಾಬಲ್ಯ ಇರಲಿ" ಎಂದಿದ್ದಾರೆ.
"ಭಾರತದಲ್ಲಿ ಇಸ್ಲಾಂ ಅಪಾಯವಿದೆ ಎನ್ನುವ ಖೆಡ್ಡಕ್ಕೆ ಬೀಳಬಾರದು. ಹಿಂದೂ-ಮುಸ್ಲಿಂ ಏಕತೆಯಲ್ಲಿ ಮೊದಲು ಹಿಂದೂಗಳು ಹಾಗೂ ಮುಸ್ಲಿಂಮರು ಒಂದೇ ಆಗಿದ್ದರು ಎನ್ನುವ ದಾರಿತಪ್ಪಿಸುವ ಹೇಳಿಕೆಗಳಿಗೆ ಕಿವಿಕೊಡಬಾರದು" ಎಂದು ಹೇಳಿದ್ದಾರೆ.
"ಗೋವು ಪವಿತ್ರವಾದ ಪ್ರಾಣಿ. ಆದರೆ, ಬೇರೆಯವರನ್ನು ಹತ್ಯೆ ಮಾಡಲು ಯತ್ನಿಸುತ್ತಿರುವವು ಹಿಂದುತ್ವದ ವಿರುದ್ದವಾಗಿ ಹೋಗುತ್ತಿದ್ದಾರೆ. ಅಂತವರ ವಿರುದ್ದ ಪಕ್ಷಪಾತವಾಗಿ ಕಾನೂನು ಕ್ರಮ ತೆಗೆದುಕೊಳ್ಳಬೇಕು" ಎಂದಿದ್ದಾರೆ.
"ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥರು, ಹಿಂದೂ-ಮುಸ್ಲಿಂ ನಡುವಿನ ಉತ್ತಮ ಬಾಂಧವ್ಯಕ್ಕೆ ಪ್ರಬಲವಾದ ಸಂದೇಶವನ್ನು ನೀಡಿದ್ದು, ಹಿಂದೂಗಳು ಅಥವಾ ಮುಸ್ಲಿಮರು ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಒಬ್ಬರ ಮೇಲೆ ಮತ್ತೊಬ್ಬರು ಪ್ರಾಬಲ್ಯ ಸಾಧಿಸುವಂತಿರವಾರದು" ಎಂದು ಹೇಳಿದ್ದಾರೆ.