ನವದೆಹಲಿ,ಜು 03 (DaijiworldNews/MS): ಭಾರತದಲ್ಲಿ ಜು.3 ರ ಶನಿವಾರ ಬೆಳಿಗ್ಗೆ 8 ಗಂಟೆಗೆ ಅಂತ್ಯವಾದ 24 ಗಂಟೆಗಳ ಅವಧಿಯಲ್ಲಿ 44,111 ಹೊಸ ಕೋವಿಡ್ 19 ಸೋಂಕು ಪ್ರಕರಣ ಪತ್ತೆಯಾಗಿದ್ದು, 738 ಮಂದಿ ಸಾವನ್ನಪ್ಪಿರುವುದಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬಿಡುಗಡೆಗೊಳಿಸಿರುವ ಅಂಕಿಅಂಶದಲ್ಲಿ ತಿಳಿಸಿದೆ.
ಕಳೆದ 24ಗಂಟೆಯಲ್ಲಿ ಕೋವಿಡ್ ನಿಂದ 738 ಮಂದಿ ಸಾವನ್ನಪ್ಪಿದ್ದು, 57,477 ಜನರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ಈವರೆಗೆ ದೇಶದಲ್ಲಿ ಕೋವಿಡ್ ನಿಂದ ಸಾವನ್ನಪ್ಪಿರುವವರ ಸಂಖ್ಯೆ 4,01,050ಕ್ಕೆ ಏರಿಕೆಯಾಗಿದೆ. ಅಲ್ಲದೇ ಒಟ್ಟು 2,96,05,779 ಮಂದಿ ಕೋವಿಡ್ ನಿಂದ ಗುಣಮುಖರಾಗಿದ್ದಾರೆ ಎಂದು ತಿಳಿಸಿದೆ.
ಮತ್ತೊಂದೆಡೆ ಸಕ್ರಿಯ ಸೋಂಕಿತರ ಸಂಖ್ಯೆ 4,95,533ಕ್ಕೆ ಕುಸಿದಿದ್ದು, ಹಲವು ದಿನಗಳ ಬಳಿಕ ದೇಶದಲ್ಲಿ ದಾಖಲಾಗಿರುವ ಅತೀ ಕನಿಷ್ಠ ಸಕ್ರಿಯ ಸೋಂಕಿತರ ಸಂಖ್ಯೆ ಇದಾಗಿದೆ.
ದೇಶದಲ್ಲಿನ ವಾರದ ಪಾಸಿಟಿವಿಟಿ ದರ ಶೇ.2.50ಕ್ಕೆ ಇಳಿಕೆಯಾಗಿದ್ದು, ದಿನದ ಪಾಸಿಟಿವಿಟಿ ದರ ಶೇ.2.35ಕ್ಕೆ ಇಳಿಕೆಯಾಗಿದೆ.