ನವದೆಹಲಿ, ಜು 03 (DaijiworldNews/PY): ಭಾರತ್ ಬಯೋಟೆಕ್ ಕಂಪನಿ ಕೋವ್ಯಾಕ್ಸಿನ್ ಲಸಿಕೆಯ ಅಂತಿಮ ವಿಶ್ಲೇಷಣೆಯನ್ನು ಪರಿಣಾಮಕಾರಿತ್ವದ ವಿವರವನ್ನು ಬಿಡುಗಡೆಗೊಳಿಸಿದೆ.
ಕೊರೊನಾ ದೃಢಪಟ್ಟ 130 ಪ್ರಕರಣಗಳನ್ನು ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ನಲ್ಲಿ ವಿಶ್ಲೇಷಣೆಗೆ ಒಳಪಡಿಸಲಾಗಿತ್ತು. ಈ ಲಸಿಕೆಯು, ಸೌಮ್ಯ ಹಾಗೂ ತೀವ್ರ ರೋಗಲಕ್ಷಣದ ಕೊರೊನಾ ಪ್ರಕರಣಗಳನ್ನು ನಿಯಂತ್ರಿಸುವಲ್ಲಿ ಶೇ.77.8ರಷ್ಟು ಪರಿಣಾಮಕಾರಿಯಾಗಿರುವುದು ತಿಳಿದುಬಂದಿದೆ ಎಂದು ಭಾರತ್ ಬಯೋಟೆಕ್ ಹೇಳಿರುವುದಾಗಿ ಸುದ್ದಿಸಂಸ್ಥೆಯೊಂದು ಟ್ವೀಟ್ ಮಾಡಿದೆ.
ಲಸಿಕೆಯು, ತೀವ್ರ ರೋಗಲಕ್ಷಣ ನಿಯಂತ್ರಣ ಹಾಗೂ ಆಸ್ಪತ್ರೆಗೆ ದಾಖಲಾಗದಂತೆ ಮಾಡುವಲ್ಲಿ ಶೇ.93.4ರಷ್ಟು ಪರಿಣಾಮಕಾರಿಯಾಗಿದೆ. ಕೊರೊನಾ ವೈರಸ್ನ ಡೆಲ್ಟಾ ರೂಪಾಂತರಿ ಬಿ.1.617.2ನ ವಿರುದ್ದ ಲಸಿಕೆ ಶೇ.65.2ರಷ್ಟು ಪರಿಣಾಮಕಾರಿಯಾಗಿದೆ.
"2019ರಲ್ಲಿ ಭಾರತ ಹಾಗೂ ಅಮೆರಿಕದ ಕಂಪನಿಗಳ ಸಹಯೋಗದಲ್ಲಿ ಪ್ರಾರಂಭಿಸಿದ್ದ ಸಂಶೋಧನೆಯು ಈಗ ಭಾರತದಲ್ಲಿ ಕೊರೊನಾ ವಿರುದ್ದ ಬಳಸುತ್ತಿರುವ ಕೊವ್ಯಾಕ್ಸಿನ್ ಲಸಿಕೆ ಪರಿಣಾಮದ ಪ್ರಮಾಣವನ್ನು ಹೆಚ್ಚಿಸಿದೆ" ಎಂದು ಇತ್ತೀಚೆಗೆ ಅಮೇರಿಕಾದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ತಿಳಿಸಿತ್ತು.