ನವದೆಹಲಿ, ಜು.02 (DaijiworldNews/HR): ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಅವರಿಗೆ ಓದಲು ಬರುವುದಿಲ್ಲವೇ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರು ಪ್ರಶ್ನಿಸಿದ್ದಾರೆ.
ಲಸಿಕೆಯ ಕುರಿತು ಪ್ರಶ್ನಿಸಿ ರಾಹುಲ್ ಗಾಂಧಿ ಅವರು ಮಾಡಿರುವ ಟ್ವೀಟ್ಗೆ ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಹರ್ಷವರ್ಧನ್, "ಜುಲೈ ತಿಂಗಳ ಲಸಿಕೆ ಲಭ್ಯತೆಗೆ ಸಂಬಂಧಿಸಿದ ಅಂಕಿ ಅಂಶಗಳನ್ನು ಗುರುವಾರ ಬಹಿರಂಗಪಡಿಸಿದ್ದು, ರಾಹುಲ್ ಗಾಂಧಿ ಅವರ ಸಮಸ್ಯೆ ಏನಂತೆ? ಅವರಿಗೆ ಓದಲು ಬರುವುದಿಲ್ಲವೇ? ಅವರಿಗೆ ಅರ್ಥವಾಗುವುದಿಲ್ಲವೇ? ಅಹಂಕಾರ ಮತ್ತು ನಿರ್ಲಕ್ಷ್ಯವೆಂಬ ವೈರಸ್ಗೆ ಲಸಿಕೆ ಇಲ್ಲ" ಎಂದಿದ್ದಾರೆ.
ಇನ್ನು ಲಸಿಕೆ ನೀಡಿಕೆ ಅಭಿಯಾನಕ್ಕೆ ಸಂಬಂಧಿಸಿ ಈ ಹಿಂದೆ ಡಾ. ಮನಮೋಹನ್ ಸಿಂಗ್ ಅವರು ಸಲಹೆ ನೀಡಿದ್ದನ್ನು ಉಲ್ಲೇಖಿಸಿದ ಅವರು, "ನಿಮ್ಮ ರಚನಾತ್ಮಕ ಸಹಕಾರ ಮತ್ತು ಸಲಹೆಗಳನ್ನು ಇಂಥ ಸಂಕಷ್ಟದ ಸಂದರ್ಭದಲ್ಲಿ ಇತರ ಕಾಂಗ್ರೆಸ್ ನಾಯಕರೂ ಪಾಲಿಸಬೇಕು" ಎಂದು ಹೇಳಿದ್ದಾರೆ.