ಬೆಂಗಳೂರು, ಜು.02 (DaijiworldNews/HR): ಕೋಟ್ಯಂತರ ರೂಪಾಯಿ ಹಣವನ್ನು ಸಚಿವರ ಹೆಸರಲ್ಲಿ ವಸೂಲಿ ಮಾಡಿರುವ ಆರೋಪದ ಮೇಲೆ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರ ಆಪ್ತ ಸಹಾಯಕರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಸಚಿವ ಶ್ರೀರಾಮುಲು ಆಪ್ತ ಸಹಾಯಕನನ್ನು ರಾಜು ಎಂದು ಗುರುತಿಸಲಾಗಿದೆ.
ರಾಜು ಅವರ ವಿರುದ್ಧ ಈ ಹಿಂದೆ ಸಿಸಿಬಿಯಲ್ಲಿ ಹಲವು ದೂರುಗಳು ದಾಖಲಾಗಿದ್ದು, ಅಲ್ಲದೇ ತಮ್ಮ ಹೆಸರು ದುರ್ಬಳಕೆ ಮಾಡುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರಕೂಡ ಸಿಸಿಬಿಗೆ ದೂರು ನೀಡಿದ್ದಾರೆ.
ಇನ್ನು ದೂರು ದಾಖಲಿಸಿಕೊಂಡ ಸಿಸಿಬ ಅಧಿಕಾರಿಗಳು ಗುರುವಾರ ಸಂಜೆ ಸಚಿವ ಶ್ರೀರಾಮುಲು ಅವರ ಮನೆಯ ಬಳಿಯಲ್ಲಿ ರಾಜು ಅವರನ್ನು ಬಂಧಿಸಿದ್ದಾರೆ.