ನವದೆಹಲಿ, ಜು. 01 (DaijiworldNews/SM): ದೇಶದಲ್ಲಿ ಸಾಲ ವಂಚನೆ ಮಾಡಿ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ನೀರವ್ ಮೋದಿ ಸಹೋದರ ಪೂರ್ವಿ ಮೋದಿಯ ಖಾತೆಯಿಂದ 17.25 ಕೋಟಿ ರೂಪಾಯಿ ವಶಕ್ಕೆ ಪಡೆದುಕೊಳ್ಳಲಾಗಿದೆ.
ಬರೋಬ್ಬರಿ 17.25 ಕೋಟಿ ರೂಪಾಯಿ ಬ್ರಿಟನ್ ಬ್ಯಾಂಕ್ ಖಾತೆಯಲ್ಲಿತ್ತು. ಆ ಮೊತ್ತವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ(ಇಡಿ) ತಿಳಿಸಿದೆ. ಪ್ರಕರಣದಲ್ಲಿ ಸಹಾಯ ನೀಡಿದರೆ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿಂದ ಕ್ಷಮಿಸಲು ಅನುಮತಿ ಇರುವುದಾಗಿ ತಿಳಿಸಲಾಗಿತ್ತು. ಇದರ ಬೆನ್ನಲ್ಲೇ ಬ್ಯಾಂಕ್ ಖಾತೆಯಿಂದ 17 ಕೋಟಿ ರೂ.ಗಳನ್ನು ಭಾರತೀಯ ಸರ್ಕಾರಕ್ಕೆ ರವಾನಿಸಿದ್ದಾರೆ ಎಂದು ಇಡಿ ತಿಳಿಸಿದೆ.
ಪೂರ್ವಿ ಮೋದಿಯವರ ಸಹಕಾರದಿಂದ ಇಡಿ ಅಪರಾಧಿಯ ಆದಾಯದಿಂದ ಸುಮಾರು 17.25 ಕೋಟಿ ರೂ. ವಸೂಲಿ ಮಾಡಲು ಸಾಧ್ಯವಾಗಿದೆ ಎಂದು ಇಡಿ ಮೂಲಗಳಿಂದ ಮಾಹಿತಿ ಲಭಿಸಿದೆ. ಇನ್ನು ವಿದೇಶಕ್ಕೆ ಪರಾರಿಯಾಗಿರುವ ನೀರವ್ ಮೋದಿ ಪ್ರಸ್ತುತ ಬ್ರಿಟನ್ ಜೈಲಿನಲ್ಲಿದ್ದಾರೆ.