ನವದೆಹಲಿ, ಜು. 01(DaijiworldNews/HR): ಪಾಕಿಸ್ತಾನದ ಜೈಲುಗಳಲ್ಲಿ ಸಿಲುಕಿಕೊಂಡಿರುವ ಭಾರತೀಯ ನಾಗರಿಕ ಕೈದಿಗಳು ಮತ್ತು ಕಾಣೆಯಾದ ರಕ್ಷಣಾ ಸಿಬ್ಬಂದಿಯನ್ನು ಆದಷ್ಟ್ಯ್ ಬೇಗ ಬಿಡುಗಡೆ ಮಾಡುವುದು ಮತ್ತು ವಾಪಸ್ ಕಳುಹಿಸುವುದಕ್ಕೆ ಭಾರತ ಗುರುವಾರ ಪಾಕಿಸ್ತಾನಕ್ಕೆ ಕರೆ ನೀಡಿದೆ.
2008 ರ ಒಪ್ಪಂದದ ನಿಬಂಧನೆಗಳಿಗೆ ಅನುಗುಣವಾಗಿ ಎರಡು ದೇಶಗಳ ನಾಗರಿಕ ಕೈದಿಗಳು ಮತ್ತು ಮೀನುಗಾರರನ್ನು ಪರಸ್ಪರ ಬಂಧನದಲ್ಲಿರಿಸಿಕೊಂಡಿವೆ.
ಇನ್ನು ಭಾರತೀಯ ವಶದಲ್ಲಿರುವ 271 ಪಾಕಿಸ್ತಾನಿ ನಾಗರಿಕ ಕೈದಿಗಳು ಮತ್ತು 74 ಮೀನುಗಾರರ ಪಟ್ಟಿಯನ್ನು ಭಾರತ ಹಸ್ತಾಂತರಿಸಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಪಾಕಿಸ್ತಾನವು ತನ್ನ ವಶದಲ್ಲಿರುವ 51 ನಾಗರಿಕ ಕೈದಿಗಳು ಮತ್ತು 558 ಮೀನುಗಾರರ ಪಟ್ಟಿಯನ್ನು ಹಂಚಿಕೊಂಡಿದ್ದು, ಅವರು ಭಾರತೀಯರು ಎಂದು ನಂಬಲಾಗಿದೆ ಎಂದು ಎಂಇಎ ತಿಳಿಸಿದೆ.
ಇನ್ನು ಪಾಕಿಸ್ತಾನದ ವಶದಿಂದ ನಾಗರಿಕ ಕೈದಿಗಳು, ಕಾಣೆಯಾದ ಭಾರತೀಯ ರಕ್ಷಣಾ ಸಿಬ್ಬಂದಿ ಮತ್ತು ಮೀನುಗಾರರನ್ನು ಅವರ ದೋಣಿಗಳೊಂದಿಗೆ ಶೀಘ್ರವಾಗಿ ಬಿಡುಗಡೆ ಮಾಡಲು ಮತ್ತು ವಾಪಸ್ ಕಳುಹಿಸಲು ಸರ್ಕಾರ ಕರೆ ನೀಡಿದೆ ಎಂದು ಅದು ಹೇಳಿದೆ.
ಪರಸ್ಪರರ ವಶದಲ್ಲಿರುವ ಕೈದಿಗಳು ಮತ್ತು ಮೀನುಗಾರರಿಗೆ ಸಂಬಂಧಿಸಿದ ಎಲ್ಲಾ ಮಾನವೀಯ ವಿಷಯಗಳನ್ನು ಆದ್ಯತೆಯ ಮೇರೆಗೆ ಪರಿಹರಿಸಲು ಭಾರತ ಬದ್ಧವಾಗಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.