ಬೆಂಗಳೂರು, ಜು 01 (DaijiworldNews/PY): ಜಾಗತಿಕ ಮಟ್ಟದಲ್ಲಿ 10 ದೇಶಗಳಲ್ಲಿ 26ಕ್ಕೂ ಹೆಚ್ಚು ಮಳಿಗೆಗಳ ವಿಸ್ತಾರವಾದ ಮಾರುಕಟ್ಟೆಯನ್ನು ಹೊಂದಿರುವ ಅತಿ ದೊಡ್ಡ ಆಭರಣಗಳ ರಿಟೇಲರ್ ಆಗಿರುವ ಮಲಬಾರ್ ಗೋಲ್ಡ್ & ಡೈಮಂಡ್ಸ್ ಕೋವಿಡ್-19 ಸಾಂಕ್ರಾಮಿಕದ ವಿರುದ್ದ ತನ್ನ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದೆ.
ಕರ್ನಾಟಕದ ಬೆಂಗಳೂರಿನ ಕೋರಮಂಗಲದಲ್ಲಿರುವ ಫೋರಂ ಮಾಲ್ನಲ್ಲಿ ಬಿಪಿಎಲ್ ಪಡಿತರ ಹೊಂದಿರುವ ಬಡ ಕುಟುಂಬಗಳಿಗೆ 1000 ವ್ಯಾಕ್ಸಿನ್ ಡೋಸ್ಗಳನ್ನು ಉಚಿತವಾಗಿ ನೀಡಲಾಯಿತು.
500 ವ್ಯಾಕ್ಸಿನ್ಗಳನ್ನು ದುರ್ಬಲ ವರ್ಗದವರಿಗೆ ಹಾಗೂ ಬಿಪಿಎಲ್ ಕಾರ್ಡುದಾರರಿಗೆ ನಾರಾಯಣ ಹೃದಯಾಲಯ ಆಸ್ಪತ್ರೆ ಹಾಗೂ ಥನಲ್ (ಎನ್ಜಿಒ) ಸಹಯೋಗದಲ್ಲಿ ನೀಡಲಾಗಿದೆ ಹಾಗೂ ಉಳಿದ 500 ವ್ಯಾಕ್ಸಿನ್ಗಳನ್ನು ಕರ್ನಾಟಕ ಬೆಂಗಾಲಿ ಸ್ವರ್ಣ ಶಿಲ್ಪಿ ಅಸೋಸಿಯೇಷನ್ ಹಾಗೂ ಶ್ರೀ ವಿಶ್ವಕರ್ಮ ಸೇವಾ ಸಮಿತಿಗಳಲ್ಲಿ ನೋಂದಾಯಿತ ಚಿನ್ನಾಭರಣ ಕಾರ್ಮಿಕರಿಗೆ ನೀಡಲಾಯಿತು.
ಈ ಬಗ್ಗೆ ಮಲಬಾರ್ ಗ್ರೂಪ್ನ ಅಧ್ಯಕ್ಷ ಎಂ.ಪಿ ಅಹ್ಮದ್ ಅವರು ಮಾತನಾಡಿ, "ಕೋವಿಡ್-19ರ ಮೂರನೇ ಅಲೆ ಎದುರಾಗಬಹುದೆಂದು ದೇಶವು ನಿರೀಕ್ಷಿಸುತ್ತಿರುವ ಸಂದರ್ಭ ಸಾಂಕ್ರಾಮಿಕ ರೋಗ ನಿರೋಧಕ ಶಕ್ತಿಯು ಅದರ ಹರಡುವಿಕೆಯನ್ನು ತಡೆಯಲು ಪ್ರಮುಖವಾಗಿದೆ. ಈ ವ್ಯಾಕ್ಸಿನೇಷನ್ ಅಭಿಯಾನವು ದೇಶಾದ್ಯಂತ ಲಸಿಕಾಕರಣದ ಉಪಕ್ರಮವನ್ನು ಬಲಪಡಿಸುವ ನಮ್ಮ ಸಂಕಲ್ಪದ ಪುನರ್ದೃಢೀಕರಣವಾಗಿದೆ. ಕಡಿಮೆ ಆದಾಯವಿರುವ ಹಾಗೂ ದುರ್ಬಲ ವರ್ಗದ ಜನಸಂಖ್ಯೆಯ ಕಡೆಗೆ ನಮ್ಮ ವ್ಯಾಪ್ತಿಯನ್ನು ವಿಸ್ತರಿಸಲು ಹಾಗೂ ಅವುಗಳನ್ನು ಲಸಿಕಾಕರಣ ವ್ಯಾಪ್ತಿಯಲ್ಲಿ ತರಲು ನಾವು ನಮ್ಮ ಸಂಪನ್ಮೂಲಗಳು, ಮೂಲಸೌಕರ್ಯ ಹಾಗೂ ಜಾಲವನ್ನು ಬಳಸುವುದನ್ನು ಮುಂದುವರಿಸುತ್ತೇವೆ" ಎಂದರು.
"ಮಲಬಾರ್ ಗ್ರೂಪ್ ತಂಡದ ಸದಸ್ಯರು, ಪಾಲುದಾರರ ಜಾಲಗಳು ಹಾಗೂ ಸಮಾಜದ ಆರೋಗ್ಯ ಹಾಗೂ ಯೋಗಕ್ಷೇಮವನ್ನು ಕಾಪಾಡಲು ತನ್ನ ಸಾಮರ್ಥ್ಯದೊಳಗೆ ಎಲ್ಲವನ್ನೂ ಮುಂದುವರಿಸಲಿದೆ" ಎಂದು ಹೇಳಿದರು.