ನವದೆಹಲಿ,ಜು. 01(DaijiworldNews/HR): ಕೋವಿಶೀಲ್ಡ್ ಲಸಿಕೆ ಹಾಕಿಸಿಕೊಂಡವರು ತಮ್ಮ ದೇಶಕ್ಕೆ ಪ್ರಯಾಣ ಕೈಗೊಳ್ಳಲು ಯುರೋಪ್ನ 9 ರಾಷ್ಟ್ರಗಳು ಅವಕಾಶ ನೀಡಿವೆ ಎಂದು ತಿಳಿದು ಬಂದಿದೆ.
ಆಸ್ಟ್ರಿಯಾ, ಜರ್ಮನಿ, ಸ್ಲೊವೇನಿಯಾ, ಗ್ರೀಸ್, ಐಲ್ಯಾಂಡ್, ಐರ್ಲೆಂಡ್, ಸ್ಪೇನ್, ಸ್ವಿಟ್ಜರ್ಲೆಂಡ್ ಹಾಗೂ ಎಸ್ಟೋನಿಯಾ ಇವು ಕೋವಿಶೀಲ್ಡ್ ಲಸಿಕೆಯನ್ನು ಪಡೆದವರ ಪ್ರಯಾಣಕ್ಕೆ ಅನುಮತಿ ನೀಡಿದೆ ಎನ್ನಲಾಗಿದೆ.
ಕೊರೊನಾದ ಸಂಧರ್ಭದಲ್ಲಿ ಜನರ ಪ್ರಯಾಣಕ್ಕೆ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ಐರೋಪ್ಯ ಒಕ್ಕೂಟವು ಲಸಿಕೆ ಪಡೆದವರಿಗೆ 'ಡಿಜಿಟಲ್ ಕೊರೊನಾ ಪ್ರಮಾಣಪತ್ರ' ಅಥವಾ 'ಗ್ರೀನ್ ಪಾಸ್' ವಿತರಿಸುವ ಕಾರ್ಯಕ್ರಮ ರೂಪಿಸಿದ್ದು ಇಂದಿನಿಂದ ಜಾರಿಗೆ ಬಂದಿದೆ.
ಇನ್ನು ಈ ವ್ಯವಸ್ಥೆಯಡಿ ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ ಅನುಮೋದಿಸಿರುವ ಲಸಿಕೆಯನ್ನು ಪಡೆದವರು ಯಾವುದೇ ನಿರ್ಬಂಧಗಳಿಲ್ಲದೇ ಯುರೋಪಿಯನ್ ರಾಷ್ಟ್ರಗಳಿಗೆ ಪ್ರಯಾಣಿಸಬಹುದಾಗಿದೆ.