ಔರಂಗಾಬಾದ್, ಜು 01 (DaijiworldNews/MS): ಮಾಸ್ಕ್ ಧರಿಸದನ್ನು ಪ್ರಶ್ನಿಸಿ ದಂಡ ಪಾವತಿಸುವಂತೆ ಹೇಳಿದ ಪೊಲೀಸರಿಗೆ ಮಹಾರಾಷ್ಟ್ರ ರಾಷ್ಟ್ರೀಯ ಭದ್ರತಾ ಕಮಾಂಡೊ ಓರ್ವ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಔರಂಗಾಬಾದ್ನಲ್ಲಿ ಬುಧವಾರ ನಡೆದಿದೆ.
ಆರೋಪಿ ಎನ್ಎಸ್ಜಿ ಘಟಕದ ರೇಂಜರ್ -2 ರ ಕಮಾಂಡೋ ಮತ್ತು ಕೇಂದ್ರ ಸಶಸ್ತ್ರ ಪಡೆಗಳಿಗೆ ಸೇರಿದವನು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಘಟನೆಯಲ್ಲಿ ಔರಂಗಾಬಾದ್ ಕಂಟೋನ್ಮೆಂಟ್ ಪೊಲೀಸ್ ಠಾಣೆಯ ಒಬ್ಬ ಎಎಸ್ಪಿ ಸೇರಿದಂತೆ ಇಬ್ಬರು ಪೊಲೀಸ್ ಪೇದೆಗಳು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಲ್ಲೆ ನಡೆಸಿರುವ 34 ವರ್ಷದ ಕಮಾಂಡೊ ಪಲಂಬರಿ ತಾಲ್ಲೂಕಿನನವರಾಗಿದ್ದು, ಗಣೇಶ ಭೂಮೆ ಎಂದು ಗುರುತಿಸಲಾಗಿದೆ. ಈತ ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸಿರಲಿಲ್ಲ. ಈ ಬಗ್ಗೆ ಚೆಕ್ಪಾಯಿಂಟ್ನಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರರು ಪ್ರಶ್ನಿಸಿದಾಗ ಕಮಾಂಡೋ ಮತ್ತುನಡುವೆ ತೀವ್ರ ವಾಗ್ವಾದ ನಡೆದ ನಂತರ ಈ ಘಟನೆ ನಡೆದಿದೆ. ಫೇಸ್ ಮಾಸ್ಕ್ ಧರಿಸದ ಕಾರಣ ದಂಡ ಪಾವತಿಸುವಂತೆ ಪೊಲೀಸರು ಕಮಾಂಡೋಗೆ ಹೇಳಿದ್ದರು. ಇದನ್ನು ಪ್ರಶ್ನಿಸಿದ ಪೊಲೀಸ್ ಸಿಬ್ಬಂದಿಯ ಮೇಲೆ ಕಮಾಂಡೊ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ಅವರನ್ನು ಬಂಧಿಸಿದ್ದಾರೆ.