ನವದೆಹಲಿ, ಜು 01 (DaijiworldNews/PY): "ಜಗತ್ತಿನಲ್ಲಿ ಔಷಧ ಉತ್ಪಾದನಾ ಕ್ಷೇತ್ರದಲ್ಲಿ ಭಾರತದ ಸಾಧನೆ ಹಾಗೂ ಕೊಡುಗೆ ಶ್ಲಾಘನೀಯ. ಇದು ಸಮಾಜದ ಸ್ವಾಸ್ಥ್ಯವನ್ನು ರಕ್ಷಿಸುವಲ್ಲಿ ಸಹಕಾರಿಯಾಗಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಟ್ವೀಟ್ ಮೂಲಕ ರಾಷ್ಟ್ರೀಯ ವೈದ್ಯರ ದಿನಾಚರಣೆಯ ಅಂಗವಾಗಿ ದೇಶದ ಎಲ್ಲಾ ವೈದ್ಯರಿಗೆ ಶುಭ ಕೋರಿರುವ ಪ್ರಧಾನಿ ಮೋದಿ ಅವರು, "ವೈದ್ಯರ ದಿನದಂದು ಎಲ್ಲಾ ವೈದ್ಯರಿಗೆ ನನ್ನ ಶುಭಾಶಯಗಳು. ಜಗತ್ತಿನಲ್ಲಿ ಔಷಧ ಉತ್ಪಾದನಾ ಕ್ಷೇತ್ರದಲ್ಲಿ ಭಾರತದ ಸಾಧನೆ ಹಾಗೂ ಕೊಡುಗೆ ಶ್ಲಾಘನೀಯ. ಇದು ಸಮಾಜದ ಸ್ವಾಸ್ಥ್ಯವನ್ನು ರಕ್ಷಿಸುವಲ್ಲಿ ಸಹಕಾರಿ" ಎಂದಿದ್ದಾರೆ.
ಟ್ವೀಟ್ನಲ್ಲಿ ಕಳೆದ ಭಾನುವಾರ ಮನ್ ಕೀ ಬಾತ್ನಲ್ಲಿ ವೈದ್ಯರ ಬಗ್ಗೆ ಆಡಿರುವ ಮಾತುಗಳನ್ನು ಪ್ರಧಾನಿ ಮೋದಿ ಅವರು ಪೋಸ್ಟ್ ಮಾಡಿದ್ದಾರೆ.
"ಕೊರೊನಾ ಸಾಂಕ್ರಾಮಿಕದ ಸಂದರ್ಭ ವೈದ್ಯರು ಸಮಾಜಕ್ಕೆ ನೀಡಿರುವ ಸೇವೆಗೆ ನಾವೆಲ್ಲರೂ ಕೃತಜ್ಞರು. ತಮ್ಮ ಜೀವನದ ಬಗ್ಗೆ ವೈದ್ಯರು ಕಾಳಜಿವಹಿಸದೇ, ನಮ್ಮ ಆರೈಕೆ ಮಾಡಿದ್ದಾರೆ. ಹಾಗಾಗಿ ಈ ಬಾರಿಯ ರಾಷ್ಟ್ರೀಯ ವೈದ್ರ ದಿನವು ಅತ್ಯಂತ ವಿಶೇಷವಾಗಿದೆ" ಎಂದು ಮನ್ ಕೀ ಬಾತ್ನಲ್ಲಿ ಪ್ರಧಾನಿ ಮೋದಿ ತಿಳಿಸಿದ್ದರು.
ಖ್ಯಾತ ವೈದ್ಯ ಹಾಗೂ ಪಶ್ಚಿಮ ಬಂಗಾಳದ ಮಾಜಿ ಸಿಎಂ ಬಿ.ಸಿ ರಾಯ್ ಅವರು ಜನ್ಮದಿನದ ನೆನಪಿಗಾಗಿ ಜು.1 ಅನ್ನು ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತಿದೆ.